alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯದಲ್ಲೇ ಪತ್ನಿ, ಮಕ್ಕಳನ್ನು ಬಿಟ್ಟು ಬಂದ ಧವನ್..!?

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಹಣಾಹಣಿ ನಡೆಸಲು ಸಜ್ಜಾಗ್ತಿದೆ. ಈಗಾಗಲೇ ಟೀಂ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾ ತಲುಪಿದ್ದಾರೆ. ಆಟಗಾರರ ಜೊತೆ ಅವರ ಪತ್ನಿ ಹಾಗೂ ಮಕ್ಕಳು ಕೂಡ ಕೇಪ್ ಟೌನ್ ಹೊಟೇಲ್ ಗೆ ತೆರಳಿದ್ದಾರೆ. ಆದ್ರೆ ಆಟಗಾರ ಶಿಖರ್ ಧವನ್ ಪ್ರಯಾಣ ಸುಖಕರವಾಗಿರಲಿಲ್ಲ.

ಧವನ್ ಈ ವಿಷ್ಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗುವನ್ನು ಧವನ್ ದುಬೈ ವಿಮಾನ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಜನನ ದಾಖಲೆ ಜೊತೆ ಕೆಲವೊಂದು ದಾಖಲೆಗಳನ್ನು ಕೇಳಿದ್ದಾರೆ. ಆದ್ರೆ ಅದು ಧವನ್ ಪತ್ನಿ ಬಳಿಯಿರಲಿಲ್ಲ. ಹಾಗಾಗಿ ಅವರು ಅಲ್ಲಿಯೇ ಇರಬೇಕಾಯ್ತು. ದಾಖಲೆ ದುಬೈ ತಲುಪುವುದನ್ನು ಧವನ್ ಪತ್ನಿ ಕಾಯ್ತಿದ್ದಾರೆ.

ಇದೇ ವೇಳೆ ಧವನ್ ಎಮಿರೇಟ್ಸ್ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ವಿಮಾನ ಏರುವ ವೇಳೆ ಯಾವುದೇ ದಾಖಲೆ ಕೇಳಿಲ್ಲ. ಆದ್ರೆ ದುಬೈಗೆ ಬಂದ ನಂತ್ರ ಕೇಳಿದ್ದಾರೆ. ದಾಖಲೆ ಬೇಕೆನ್ನುವ ಬಗ್ಗೆಯೂ ಮೊದಲೇ ಮಾಹಿತಿ ನೀಡಿಲ್ಲ. ಎಮಿರೇಟ್ಸ್ ವರ್ತನೆ ಬಹಳ ಅಸಭ್ಯ ಹಾಗೂ ವೃತ್ತಿಪರವಾಗಿರಲಿಲ್ಲವೆಂದು ಧವನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...