alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ -20 : ರೋಚಕ ಜಯದೊಂದಿಗೆ ಭಾರತಕ್ಕೆ ಸರಣಿ

ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ -20 ಪಂದ್ಯದಲ್ಲಿ 6 ರನ್ ಅಂತರದಿಂದ ರೋಚಕ ಜಯಗಳಿಸಿದ ಟೀಂ ಇಂಡಿಯಾ ಐತಿಹಾಸಿಕ ಟಿ -20 ಸರಣಿಯನ್ನು ಜಯಿಸಿದೆ.

ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿದ್ದು, 8 ಓವರ್ ಗಳಿಗೆ ಪಂದ್ಯವನ್ನು ನಿಗದಿಗೊಳಿಸಲಾಗಿತ್ತು. 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವನ್ನು ರಾತ್ರಿ 9.30 ಕ್ಕೆ ಆರಂಭಿಸಲಾಗಿದೆ.

ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು.

ಭಾರತದ ಪರ ರೋಹಿತ್ ಶರ್ಮಾ 8, ಶಿಖರ್ ಧವನ್ 6, ವಿರಾಟ್ ಕೊಹ್ಲಿ 13, ಶ್ರೇಯಸ್ ಅಯ್ಯರ್ 6, ಮನೀಶ್ ಪಾಂಡೆ 17, ಹಾರ್ದಿಕ್ ಪಾಂಡ್ಯ ಅಜೇಯ 14, ಎಂ.ಎಸ್. ಧೋನಿ ಅಜೇಯ 0 ರನ್ ಗಳಿಸಿದ್ದಾರೆ.

ಟಿಮ್ ಸೋಥಿ, ಇಶ್ ಸೋದಿ ತಲಾ 2 ವಿಕೆಟ್ ಪಡೆದಿದ್ದಾರೆ. 68 ರನ್ ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿ ಸೋಲು ಕಂಡಿತು.  ಭಾರತದ ಪರ ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು.

ಕೊನೆಯ ಓವರ್ ನಲ್ಲಿ 19 ರನ್ ಗಳಿಸಬೇಕಿದ್ದ ನ್ಯೂಜಿಲೆಂಡ್ ಅಂತಿಮವಾಗಿ 6 ರನ್ ಅಂತರದಿಂದ ಸೋಲು ಕಂಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...