alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ಬಗ್ಗೆ ಕುತೂಹಲ ಮೂಡಿಸಿದ ಸೌರವ್ ಗಂಗೂಲಿ

gangooli-dd

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನಕ್ಕೆ, ಯಾರನ್ನು ನೇಮಕ ಮಾಡಲಾಗುವುದು ಎಂಬ ಕುತೂಹಲ ಇಂದೂ ಮುಂದುವರೆದಿದೆ.

ಬಿ.ಸಿ.ಸಿ.ಐ. ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಮತ್ತಿರನ್ನೊಳಗೊಂಡ ತಂಡ, ಮುಂಬೈನಲ್ಲಿ ಕೋಚ್ ಆಯ್ಕೆ ಕುರಿತಾಗಿ ಹಲವರ ಸಂದರ್ಶನ ನಡೆಸಿದೆ.

ರವಿಶಾಸ್ತ್ರಿ, ವೀರೇಂದರ್ ಸೆಹ್ವಾಗ್, ಟಾಮ್ ಮೂಡಿ ಸೇರಿದಂತೆ ಹಲವರ ಸಂದರ್ಶನ ನಡೆಸಲಾಗಿದೆ. ಸಂದರ್ಶನದ ಹೊರತಾಗಿಯೂ ಸಲಹ ಸಮಿತಿ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಸದ್ಯಕ್ಕೆ ಕೋಚ್ ಆಯ್ಕೆ ಕುರಿತಾಗಿ ತೀರ್ಮಾನ ಕೈಗೊಂಡಿಲ್ಲ. ಶ್ರೀಲಂಕಾ ಪ್ರವಾಸದ ವೇಳೆಗೆ ನೂತನ ಕೋಚ್ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ ಬಳಿಕ ಅವರೊಂದಿಗೆ ಚರ್ಚಿಸಿ ಕೋಚ್ ಯಾರೆಂಬುದನ್ನು ಪ್ರಕಟಿಸಲಾಗುವುದು. ಸಂದರ್ಶನ ಈಗಷ್ಟೇ ಮುಗಿದಿದೆ. ಕೋಚ್ ಆಯ್ಕೆಗೆ ಈಗಲೇ ಆತುರವಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...