alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಆಟಗಾರನ ಜೊತೆ ಶಾಪಿಂಗ್ ಮಾಡ್ತಿದ್ದಾಳೆ ತಮನ್ನಾ…!

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸುದ್ದಿ ಸಕ್ರಿಯವಾಗಿರುತ್ತದೆ. ಬಾಹುಬಲಿ-2 ಬೆಡಗಿ ತಮನ್ನಾ ಭಾಟಿಯಾ ಬಗ್ಗೆ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಭಾಟಿಯಾ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ ಮದುವೆಯಾಗ್ತಾಳಂತೆ. ಇಬ್ಬರು ಮದುವೆಗಾಗಿ ಶಾಪಿಂಗ್ ಮಾಡ್ತಿದ್ದಾರಂತೆ. ಹೀಗಂತ ನಾವು ಹೇಳಿಲ್ಲ ಸ್ವಾಮಿ ಸಾಮಾಜಿಕ ಜಾಲತಾಣಗಳು ಹೇಳ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿದೆ. ತಮನ್ನಾ ಹಾಗೂ ಅಬ್ದುಲ್ ಈ ಫೋಟೋದಲ್ಲಿ ಜೊತೆಗಿದ್ದಾರೆ. ಹಾಗಾಗಿ ಇವರಿಬ್ಬರ ಬಗ್ಗೆ ವದಂತಿಗಳು ಹಬ್ಬಲು ಶುರುವಾಗಿವೆ.

ವಾಸ್ತವವಾಗಿ ಇದು ಹಳೆ ಫೋಟೋ. 2013ರಲ್ಲಿ ಆಭರಣದಂಗಡಿ ಉದ್ಘಾಟನೆ ವೇಳೆ ತೆಗೆದ ಫೋಟೋ ಇದು. ಆ ಸಮಾರಂಭಕ್ಕೆ ಅಬ್ದುಲ್ ರಜಾಕ್ ಹಾಗೂ ತಮನ್ನಾ ಬಂದಿದ್ದರು. ಆದ್ರೆ ಹಳೆ ಫೋಟೋ ಈಗ ಸುದ್ದಿಯಾಗ್ತಿದೆ. ಇಬ್ಬರು ಮದುವೆಯಾಗ್ತಿದ್ದಾರೆನ್ನುವವರೆಗೆ ಹೋಗಿದೆ.

ರಜಾಕ್ ಗೆ ಈಗಾಗಲೇ ಮದುವೆಯಾಗಿದೆ. ತಮನ್ನಾ-ಅಬ್ದುಲ್ ಮದುವೆ  ಸುದ್ದಿ ಕ್ರಿಕೆಟ್ ಜಗತ್ತಿನಲ್ಲೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದ್ರೆ ತಮನ್ನಾ ಹಾಗೂ ಅಬ್ದುಲ್ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...