alex Certify
ಕನ್ನಡ ದುನಿಯಾ       Mobile App
       

Kannada Duniya

ಲೆವಿಸ್ ಭರ್ಜರಿ ಶತಕ: ಟಿ20 ಯಲ್ಲಿ ಕೊಹ್ಲಿ ಪಡೆಗೆ ಸೋಲು

koli-solu

ಕಿಂಗ್ ಸ್ಟನ್: ಇಲ್ಲಿನ ಸಬಿನಾ ಪಾರ್ಕ್ ಮೈದಾನದಲ್ಲಿ ನಡೆದ ಏಕೈಕ ಟಿ 20 ಪಂದ್ಯದಲ್ಲಿ ಎವಿನ್ ಲೂವಿಸ್ ಗಳಿಸಿದ ಭರ್ಜರಿ ಶತಕದಿಂದಾಗಿ ವೆಸ್ಟ್ ಇಂಡೀಸ್ ಗೆಲುವು ಕಂಡಿದೆ.

ಭಾರತದ ಬೌಲರ್ ಗಳನ್ನು ಚೆಂಡಾಡಿದ ಲೂವಿಸ್ ಅಜೇಯ 125 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು. ವಿರಾಟ್ ಕೊಹ್ಲಿ 39, ಶಿಖರ್ ಧವನ್ 23, ರಿಶಬ್ ಪಂತ್ 38, ದಿನೇಶ್ ಕಾರ್ತಿಕ್ 48, ಎಂ.ಎಸ್. ಧೋನಿ 2, ಕೇದಾರ್ ಜಾಧವ್ 4, ಆರ್. ಜಡೇಜ ಅಜೇಯ 13, ಆರ್. ಅಶ್ವಿನ್ ಅಜೇಯ 11 ರನ್ ಗಳಿಸಿದ್ದಾರೆ.

ವಿಂಡೀಸ್ ಪರವಾಗಿ ಜೆರೊಮ್ ಟೇಲರ್ 2, ಕೆಸ್ರಿಕ್ ವಿಲಿಯಮ್ಸ್ 2, ಮಾರ್ಲಾನ್ ಸ್ಯಾಮುಯೆಲ್ಸ್ 1 ವಿಕೆಟ್ ಪಡೆದರು. 191 ರನ್ ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ವಿಂಡೀಸ್ ಪರವಾಗಿ ಕ್ರಿಸ್ ಗೇಲ್ 18, ಎವಿನ್ ಲೂವಿಸ್ ಅಜೇಯ 125, ಮಾರ್ಲನ್ ಸ್ಯಾಮುಯೆಲ್ಸ್ ಅಜೇಯ 36 ರನ್ ಗಳಿಸಿದ್ದಾರೆ.

62 ಎಸೆತಗಳಲ್ಲಿ 6 ಬೌಂಡರಿ, 12 ಸಿಕ್ಸರ್ ಒಳಗೊಂಡ 125 ರನ್ ಗಳಿಸಿದ ಲೂವಿಸ್ ಭಾರತದ ಗೆಲುವನ್ನು ಕಸಿದುಕೊಂಡರು. 18.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿದ ವಿಂಡೀಸ್ ಗೆಲುವಿನ ನಗೆ ಬೀರಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...