alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಟಿ-20 ತ್ರಿಕೋನ ಸರಣಿಯಲ್ಲಿ ಆಡ್ತಿಲ್ಲ ಕೊಹ್ಲಿ, ಧೋನಿ…!

ಭಾರತ ಕ್ರಿಕೆಟ್ ತಂಡಕ್ಕೆ ಬಿಡುವೇ ಇಲ್ಲ. ಒಂದಾದ ಮೇಲೊಂದು ಕ್ರಿಕೆಟ್ ಸರಣಿಗಳು ಆಟಗಾರರನ್ನು ಹೈರಾಣಾಗಿಸಿವೆ. ಈ ಬಗ್ಗೆ ಖುದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಸದ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಇದು ಮುಗಿಯುತ್ತಿದ್ದಂತೆ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ನಡುವಣ ತ್ರಿಕೋನ ಟಿ-20 ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಐವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಕೂಡ ತ್ರಿಕೋನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿ ಆಡಿ ಆಟಗಾರರು ಸುಸ್ತಾಗಿರೋದ್ರಿಂದ ಪ್ರಮುಖ ಐವರು ಆಟಗಾರರನ್ನು ಶ್ರೀಲಂಕಾಕ್ಕೆ ಕಳಿಸದಿರಲು ಬಿಸಿಸಿಐ ಚಿಂತನೆ ನಡೆಸಿದೆ.

ತ್ರಿಕೋನ ಸರಣಿ ಮುಗಿಯುತ್ತಿದ್ದಂತೆ ಐಪಿಎಲ್ ಶುರುವಾಗಲಿದೆ. ಹಾಗಾಗಿ ಶ್ರೀಲಂಕಾ ಪ್ರವಾಸಕ್ಕೆ ತೆರಳಬೇಕೋ ಬಿಡಬೇಕೋ ಅನ್ನೋ ನಿರ್ಧಾರವನ್ನು ಕೊಹ್ಲಿಗೆ ಬಿಡಲಾಗಿದೆ. ಕೊಹ್ಲಿ ಇಚ್ಛಿಸಿದ್ರೆ ತ್ರಿಕೋನ ಸರಣಿಯಲ್ಲಿ ಆಡಲೂಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...