alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ-10 ಲೀಗ್ ನಲ್ಲಿ ಶತಕ ಬಾರಿಸಿದ್ರೆ ಬಂಪರ್ ಆಫರ್…!

ಶಾರ್ಜಾದಲ್ಲಿ ಟಿ-10 ಕ್ರಿಕೆಟ್ ಲೀಗ್ ಗೆ ಚಾಲನೆ ಸಿಕ್ಕಿದೆ. ಕೇವಲ 10 ಓವರ್ ಗಳ ಈ ಮ್ಯಾಚ್ ಸಖತ್ ಥ್ರಿಲ್ಲಿಂಗ್ ಆಗಿರೋದಂತೂ ಗ್ಯಾರಂಟಿ. ಬೌಂಡರಿ, ಸಿಕ್ಸರ್ ಗಳ ಸುರಿಮಳೆಯಾಗೋ ನಿರೀಕ್ಷೆ ಇದೆ. ಸೆಟಲ್ ಆಗಿ ಆಡಲು ಹೆಚ್ಚು ಸಮಯ ಇಲ್ಲದೇ ಇರೋದ್ರಿಂದ ಹೊಡಿ-ಬಡಿ ಬ್ಯಾಟಿಂಗ್ ಇದಕ್ಕೆ ಹೆಚ್ಚು ಸೂಟ್ ಆಗಲಿದೆ.

ಇನ್ನೊಂದು ವಿಶೇಷ ಅಂದ್ರೆ ಟಿ-10 ಪಂದ್ಯದಲ್ಲೇನಾದ್ರೂ ಶತಕ ಬಾರಿಸಿದ್ರೆ, ಬಂಪರ್ ಉಡುಗೊರೆ ಕೂಡ ಸಿಗಲಿದೆ. ಸೆಂಚುರಿ ಸರದಾರರಿಗೆ ದುಬೈನಲ್ಲಿ 88 ಲಕ್ಷ ಬೆಲೆಬಾಳುವ ಅಪಾರ್ಟ್ಮೆಂಟ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ಮರಾಠಾ ಅರೇಬಿಯನ್ಸ್ ತಂಡದ ಮಾಲೀಕರಾಗಿರೋ ಅಲಿ ತಂಬಿ ಈ ಆಫರ್ ನೀಡಿದ್ದಾರೆ.

ಈ ಸಾಧನೆ ಮಾಡೋದು ತಮ್ಮ ತಂಡದ ವೀರೇಂದ್ರ ಸೆಹ್ವಾಗ್ ಹಾಗೂ ಕಮ್ರಾನ್ ಅಕ್ಮಲ್ ಅವರಂತಹ ಆಟಗಾರರಿಗೆ ಕಷ್ಟವೇನಲ್ಲ ಅಂತಾನೂ ಹೇಳಿದ್ದಾರೆ. ಅಕ್ಮಲ್ 70 ಬಾಲ್ ಗಳಲ್ಲಿ 150 ರನ್ ಸಿಡಿಸಿದ್ದಾರೆ. ಹಾಗಾಗಿ 40 ಬಾಲ್ ಗಳಲ್ಲಿ ಶತಕ ಬಾರಿಸಿದ್ರೆ ಅಚ್ಚರಿಯೇನಲ್ಲ ಎಂದಿದ್ದಾರೆ.

ಇವತ್ತಿನಿಂದ್ಲೇ ಟಿ-10 ಲೀಗ್ ಆರಂಭವಾಗಿದ್ದು ಡಿಸೆಂಬರ್ 17ರವರೆಗೂ ನಡೆಯಲಿದೆ. ಒಟ್ಟು 6 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಹಾಲಿ ಆಟಗಾರರು ಮಾತ್ರವಲ್ಲದೆ ಕೆಲವು ಮಾಜಿ ಕ್ರಿಕೆಟಿಗರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...