alex Certify
ಕನ್ನಡ ದುನಿಯಾ       Mobile App
       

Kannada Duniya

ಭುವಿ ಭರ್ಜರಿ ಬೌಲಿಂಗ್, ಮೊದಲ ಟಿ -20 ಯಲ್ಲಿ ಭಾರತಕ್ಕೆ ಜಯ

ಜೋಹಾನ್ಸ್ ಬರ್ಗ್: ಜೋಹಾನ್ಸ್ ಬರ್ಗ್ ನ ದಿ ವಾಂಡರರ್ಸ್ ಮೈದಾನದಲ್ಲಿ ನಡೆದ ಮೊದಲ ಟಿ -20 ಪಂದ್ಯದಲ್ಲಿ ಭಾರತ 28 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ.

204 ರನ್ ಗೆಲುವಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ಪರವಾಗಿ ಜೆ.ಜೆ. ಸ್ಮಟ್ಸ್ 14, ರೀಜಾ ಹೆಂಡ್ರಿಕ್ಸ್ 70, ಜೆ.ಪಿ. ಡುಮಿನಿ 3, ಡೇವಿಡ್ ಮಿಲ್ಲರ್ 9, ಫರ್ಹಾನ್ ಬೆಚಾರ್ಡಿನ್ 39, ಹೆನ್ರಿಚ್ ಕ್ಲಾಸಿನ್ 16, ಆಂಡಿಲೆ ಫೆಲ್ಕುವಾಯೊ 13, ಕ್ರಿಸ್ ಮೊರಿಸ್ 0, ಡೇನ್ ಪೀರ್ಸನ್ 1, ಜೂನಿಯರ್ ಡಾಲಾ ಅಜೇಯ 2, ತಬ್ರೇಜ್ ಶಮಿ ಅಜೇಯ 0 ರನ್ ಗಳಿಸಿದ್ದಾರೆ. 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ಸೋಲು ಕಂಡಿದೆ.

ಭಾರತದ ಪರ ಭುವನೇಶ್ವರ್ ಕುಮಾರ್ 5, ಹಾರ್ದಿಕ್ ಪಾಂಡ್ಯ 1, ಯಜುವೇಂದ್ರ ಚಾಹಲ್ 1, ಜಯದೇವ್ ಉನದ್ಕತ್ 1 ವಿಕೆಟ್ ಪಡೆದರು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಪರವಾಗಿ ರೋಹಿತ್ ಶರ್ಮಾ 21, ಶಿಖರ್ ಧವನ್ 72, ಸುರೇಶ್ ರೈನಾ 15, ವಿರಾಟ್ ಕೊಹ್ಲಿ 26, ಮನೀಶ್ ಪಾಂಡೆ ಅಜೇಯ 29, ಎಂ.ಎಸ್. ಧೋನಿ 16, ಹಾರ್ದಿಕ್ ಪಾಂಡ್ಯ ಅಜೇಯ 13 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಜೂನಿಯರ್ ಡಾಲಾ 2, ಕ್ರಿಸ್ ಮೊರಿಸ್ 1, ತಬ್ರೇಜ್ ಶಮಿ 1, ಆಂಡಿಲೆ ಫೆಲ್ಕುವಾಯೊ 1 ವಿಕೆಟ್ ಪಡೆದಿದ್ದಾರೆ. ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ದಕ್ಷಿಣ ಆಫ್ರಿಕಾ ಗೆಲುವಿಗೆ 204 ರನ್ ಗುರಿ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...