alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಪಾಕ್ ನಡುವೆ ಎಲ್ಲೂ ನಡೆಯಲ್ಲ ಕ್ರಿಕೆಟ್ ಪಂದ್ಯ….

ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಸಂಬಂಧವನ್ನು ಪುನಃ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈಗಿನ ಪರಿಸ್ಥಿತಿ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಅನುಕೂಲಕರವಾಗಿಲ್ಲವೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗ್ತಿರುವುದೇ ಇದಕ್ಕೆ ಕಾರಣವೆಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸೋಮವಾರ ವಿದೇಶಾಂಗ ಸಚಿವಾಲಯದ ಸಭೆ ನಂತ್ರ ಮಾತನಾಡಿದ ಸುಷ್ಮಾ ಸ್ವರಾಜ್ ಈ ವಿಷ್ಯ ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಭಾರತ-ಪಾಕಿಸ್ತಾನವಲ್ಲದೆ ಬೇರೆ ಯಾವುದೇ ಪ್ರದೇಶದಲ್ಲಿ ಪಂದ್ಯ ನಡೆಸಲು ಅನುಮತಿ ಸಿಗುವುದಿಲ್ಲವೆಂದು ಸುಷ್ಮಾ ಹೇಳಿದ್ದಾರೆ.

ಭಾರತ-ಪಾಕಿಸ್ತಾನದ ಸಂಬಂಧ ಹದಗೆಡುತ್ತಿದ್ದು, ಅದನ್ನು ಸುಧಾರಿಸಲು ಉಭಯ ದೇಶಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಸಬೇಕೆಂಬ ಬೇಡಿಕೆ ಅನೇಕ ದಿನಗಳಿಂದ ಕೇಳಿ ಬರ್ತಿತ್ತು. ವಯಸ್ಸಾದವರು ಮತ್ತು ಮಹಿಳೆಯರನ್ನು ಮಾನವೀಯತೆ ಮೇಲೆ ಬಿಡಬಹುದು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಸಾಧ್ಯವಿಲ್ಲವೆಂದು ಸುಷ್ಮಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...