alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ-20 ಯಲ್ಲಿ ಹೀಗೊಂದು ಅಪರೂಪದಲ್ಲಿ ಅಪರೂಪದ ದಾಖಲೆ…!

ನೆಕ್ ಟು ನೆಕ್ ಫೈಟ್ ಇರುವಂತಾ ಟಿ-20 ಇತಿಹಾಸದಲ್ಲಿ ಹೀಗೆಲ್ಲಾ ನಡೆಯುತ್ತಾ ಅನ್ನೋ ಅಚ್ಚರಿಗೆ ಕಾರಣವಾಗುವಂತಾ ಅಪರೂಪದ ಘಟನೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಡೆದಿದೆ. ಬಾರ್ಬಡೋಸ್ ಟ್ರಿಡೆಂಟ್ ಮತ್ತು ಸೇಂಟ್ ಕಿಟ್ಸ್ ನಡುವೆ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಅಪರೂಪದ ವಿಶ್ವದಾಖಲೆ ಬರೆದಿದ್ದಾರೆ.

ತಮ್ಮ ನಾಲ್ಕು ಓವರ್ ಗಳಲ್ಲಿ ಕೇವಲ ಒಂದೇ ಒಂದು ರನ್ ನೀಡಿ ಮೊಹಮ್ಮದ್ ಇರ್ಫಾನ್ ಟಿ- 20 ಯಲ್ಲಿ ಬೌಲರ್ಸ್ ಗಳ ತಾಕತ್ತೇನು ಅನ್ನೋದನ್ನ ಸಾಬೀತು ಮಾಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇರ್ಫಾನ್, ಬಾರ್ಬಡೋಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಮಗೆ ದೊರೆತ ಸ್ಪೆಲ್ ನ ಅದ್ಭುತವಾಗಿ ಬಳಕೆ ಮಾಡಿಕೊಂಡ ಇರ್ಫಾನ್ 4 ಓವರ್ ಗಳಲ್ಲಿ 23 ಡಾಟ್ ಬಾಲ್ ಗಳನ್ನು ಎಸೆದಿದ್ದಾರೆ. ಮೂರು ಓವರ್ ಗಳಲ್ಲಿ ಅವರು ಒಂದೇ ಒಂದು ರನ್ ಕೂಡ ಕೊಟ್ಟಿಲ್ಲ. ಅಲ್ಲದೇ ಎರಡು ವಿಕೆಟ್ ಗಳನ್ನು ಕೂಡ ಕಬಳಿಸಿದ್ದಾರೆ.

ತಮ್ಮ ಐತಿಹಾಸಿಕ ಸಾಧನೆಯನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಇರ್ಫಾನ್ ಗೌರವಯುತ ಮತ್ತು ಅಪರೂಪದ ಸಾಧನೆಗೆ ಅವಕಾಶ ಕಲ್ಪಿಸಿದ ಕೆರಿಬಿಯನ್ ಪ್ರೀಮಿರ್ ಲೀಗ್ ಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲ ಸಾಧನೆ ಇಷ್ಟಕ್ಕೆ ಸೀಮಿತ ಮಾಡೋದಿಲ್ಲ. ಕೆರಿಬಿಯನ್ನರ ಪ್ರೀತಿ ಮತ್ತು ಗೌರವಾದರಗಳಿಗೆ ನಾನು ಚಿರಋಣಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...