alex Certify
ಕನ್ನಡ ದುನಿಯಾ       Mobile App
       

Kannada Duniya

ರೈನಾ ಸಿಕ್ಸ್ ಗೆ ಗಾಯಗೊಂಡ ಬಾಲಕ

boy_ibnqeah

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ 20-20 ಪಂದ್ಯ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 202 ರನ್ ಗಳಿಸಿತ್ತು. ಸುರೇಶ್ ರೈನಾ ಬ್ಯಾಟಿಂಗ್ ಮಾಡ್ತಿದ್ದಾಗ ಬಾಲ್ ಹೊಡೆದು  6 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದ.

ಸುರೇಶ್ ರೈನಾ ಸಿಕ್ಸ್ ಬಾರಿಸಿದಾಗ ಆ ಬಾಲ್ ಆರು ವರ್ಷದ ಸತೀಶ್ ಗೆ ತಾಗಿದೆ. ಸತೀಶ್ ಎಡ ತೊಡೆಗೆ ಬಾಲ್ ಹೊಡೆದಿದ್ದು, ಸತೀಶ್ ನನ್ನು ತಕ್ಷಣ ಕ್ರೀಡಾಂಗಣದಲ್ಲಿರುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಯ್ತು. ಸಣ್ಣ ನೋವಾಗಿದ್ದರಿಂದ 10 ನಿಮಿಷದಲ್ಲಿ ಬಾಲಕನನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಸ್ವಲ್ಪ ಸಮಯದಲ್ಲಿಯೇ ಚೇತರಿಸಿಕೊಂಡ ಬಾಲಕ ಮತ್ತೆ ಸ್ಟೇಡಿಯಂಗೆ ಬಂದಿದ್ದಾನೆ. ಪೂರ್ತಿ ಕ್ರಿಕೆಟ್ ನೋಡಿ ಮನೆಗೆ ತೆರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...