alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗರ್ ಆದ್ರು ಕ್ರಿಕೆಟ್ ನಿಂದ ಹೊರಗುಳಿದಿರುವ ರೈನಾ

ಕ್ರಿಕೆಟರ್ ಸುರೇಶ್ ರೈನಾರನ್ನು ಅಭಿಮಾನಿಗಳು ಮೈದಾನದಲ್ಲಿ ಮಿಸ್ ಮಾಡಿಕೊಳ್ತಿದ್ದಾರೆ. ಆದಷ್ಟು ಬೇಗ ತಂಡಕ್ಕೆ ವಾಪಸ್ ಬನ್ನಿ ಎನ್ನುತ್ತಿದ್ದಾರೆ. ಬ್ಯಾಟ್ ಹಿಡಿದು ಮೈದಾನಕ್ಕಿಳಿಯದ ಸುರೇಶ್ ರೈನಾ ಬೇರೆ ಕೆಲಸದಲ್ಲಿ ಬ್ಯುಸಿಯಿದ್ದಾರೆ.

ಕಳಪೆ ಫಾರ್ಮ್ ನಿಂದಾಗಿ ಸುರೇಶ್ ರೈನಾ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಟೀಂ ಇಂಡಿಯಾ ಆಟಗಾರರು ಕೇವಲ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಾತ್ರ ಪ್ರವೀಣರಲ್ಲ. ಡಾನ್ಸ್, ಹಾಡು ಸೇರಿದಂತೆ ಬೇರೆ ಕೌಶಲ್ಯ ಕೂಡ ಅವರಲ್ಲಿದೆ.

ತಂಡದಿಂದ ಹೊರಗಿರುವ ಸುರೇಶ್ ರೈನಾ ಹಾಡಿನ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸುರೇಶ್ ರೈನಾ ವಿಡಿಯೋ ಒಂದನ್ನು ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದೆ. ಈ ವಿಡಿಯೋವನ್ನು ಕೇವಲ 2 ಗಂಟೆಯಲ್ಲಿ 212,778 ಮಂದಿ ವೀಕ್ಷಿಸಿದ್ದಾರೆ.

ಈ ವಿಡಿಯೋದಲ್ಲಿ ರೈನಾ ಸಪನೋಂಕೆ ನನಿಹಾಲ್ ಮೇ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ರೈನಾ ಪತ್ನಿ ಪ್ರಿಯಾಂಕ ಚೌಧರಿ ಕೂಡ ಕಾಣಿಸಿಕೊಂಡಿದ್ದಾರೆ. ರೈನಾ ಹಾಡಿಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೈನಾ ಈ ಹಿಂದೆ 2015ರಲ್ಲಿ ಹಾಡೊಂದನ್ನು ಹಾಡಿ ಅಭಿಮಾನಿಗಳ ಮನಗೆದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...