alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೆಷಲ್ ಗಿಫ್ಟ್ ಗಾಗಿ ರೈನಾ ಖರೀದಿ ಮಾಡಿದ್ದಾರೆ 72 ಲಕ್ಷದ ಕಾರು

ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಮಂಗಳವಾರ ಹೊಸ ಕಾರು ಖರೀದಿ ಮಾಡಿದ್ದಾರೆ. ಮರ್ಸಿಡಿಸ್ GLE 350D ಕಾರನ್ನು ರೈನಾ ಉತ್ತರಾಖಂಡ್ ದ ಡೆಹ್ರಾಡೂನ್ ನಲ್ಲಿ ಖರೀದಿ ಮಾಡಿದ್ದಾರೆ. ನೇವಿ ಬ್ಲ್ಯೂ ಬಣ್ಣದ ಕಾರ್ ಡೆಹ್ರಾಡೂನ್ ನಲ್ಲಿ ಲಭ್ಯವಿದ್ದ ಕಾರಣ ಅಲ್ಲಿಂದ ರೈನಾ ಕಾರು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಈ ಐಷಾರಾಮಿ ಕಾರನ್ನು ರೈನಾ ತಮ್ಮ ತಂದೆ-ತಾಯಿಗೆ ಉಡುಗೊರೆಯಾಗಿ ನೀಡಲಿದ್ದಾರೆ. ಭಾರತದಲ್ಲಿ ಇದ್ರ ಬೆಲೆ 72 ರಿಂದ 74 ಲಕ್ಷ ರೂಪಾಯಿಯೊಳಗಿದೆ. ಕಾರು ಖರೀದಿ ಬಗ್ಗೆ ರೈನಾ ಅಧಿಕೃತ ಹೇಳಿಕೆ ನೀಡಿದ್ದಾರೆ. ನೇವಿ ಬ್ಲ್ಯೂ ಬಣ್ಣದ ಕಾರಿಗಾಗಿ ಡೆಹ್ರಾಡೂನ್ ನಲ್ಲಿ ಕಾರು ಖರೀದಿ ಮಾಡಬೇಕಾಯ್ತು ಎಂದಿದ್ದಾರೆ.

ಎಡಗೈ ಬ್ಯಾಟ್ಸ್ಮನ್ ರೈನಾ ದಕ್ಷಿಣ ಆಫ್ರಿಕಾ ವಿರುದ್ಧ 2015ರಲ್ಲಿ ಮುಂಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು. ಈವರೆಗೆ 223 ಏಕದಿನ ಪಂದ್ಯಗಳನ್ನಾಡಿರುv ರೈನಾ 5568 ರನ್ ಗಳಿಸಿದ್ದಾರೆ. 30 ವರ್ಷದ ರೈನಾ ಫಿಟ್ನೆಸ್ ಸಮಸ್ಯೆಯಿಂದಾಗಿ ಸದ್ಯ ತಂಡದಿಂದ ಹೊರಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...