alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ಗಂಟೆಯಲ್ಲೇ ಬ್ರೇಕ್ ಆಯ್ತು ಕೊಹ್ಲಿ 10 ವರ್ಷಗಳಲ್ಲಿ ಮಾಡಿದ ದಾಖಲೆ

raina_vj2assa-1

ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ  ಐಪಿಎಲ್ 10ನೇ ಆವೃತ್ತಿಯಲ್ಲಿ ಹೊಸ ದಾಖಲೆ ಬರೆದಿದ್ದರು. ಶುಕ್ರವಾರ ಮೊದಲ ಬಾರಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸುರೇಶ್ ರೈನಾ ದಾಖಲೆ ಹಿಂದಿಕ್ಕಿ ಕೊಹ್ಲಿ 4172 ರನ್ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು.

ಕೊಹ್ಲಿ ಬರೆದ ದಾಖಲೆ ಕೆಲ ಗಂಟೆಗಳಿಗೆ ಮಾತ್ರ ಸೀಮಿತಾಯ್ತು. ಅದೇ ದಿನ ಎರಡನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್ ನಾಯಕ ಸುರೇಶ್ ರೈನಾ ಕೊಹ್ಲಿ ದಾಖಲೆಯನ್ನು ಬದಿಗಟ್ಟಿದ್ರು. ರೈನಾ 4206 ರನ್ ಗಳ ಮೂಲಕ ಈಗ ಪಟ್ಟಿಯಲ್ಲಿ ಮೊದಲಿದ್ದಾರೆ.

ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ 4110 ರನ್ ಗಳ ಮೂಲಕ ಮೊದಲ ಸ್ಥಾನದಲ್ಲಿದ್ದರು. ಅವರು ಕೆಲ ಪಂದ್ಯಗಳಲ್ಲಿ ಆಡಿರಲಿಲ್ಲ. ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಇಲ್ಲಿದೆ.

ಮೊದಲ ಸ್ಥಾನದಲ್ಲಿ ಸುರೇಶ್ ರೈನಾ: 4206 ರನ್. ಶತಕ 1. ಅರ್ಧ ಶತಕ 29

ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ : 4172 ರನ್. ಶತಕ 4, ಅರ್ಧ ಶತಕ 27

ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ: 3883 ರನ್. ಶತಕ 1,ಅರ್ಧ ಶತಕ 29

ನಾಲ್ಕನೇ ಸ್ಥಾನದಲ್ಲಿ ಗೌತಮ್ ಗಂಭೀರ: 3801 ರನ್. ಶತಕ 0,ಅರ್ಧ ಶತಕ 33

ಐದನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ : 3512 ರನ್.ಶತಕ 2,ಅರ್ಧಶತಕ 33

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...