alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಂಚಣಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಸುರೇಶ್ ರೈನಾ..!

raina

ನವದೆಹಲಿ: ಯಶ್ ಭಾರ್ತಿ ಪ್ರಶಸ್ತಿ ಪಡೆದವರಿಗೆ ತಿಂಗಳಿಗೆ 50,000 ರೂ. ಪಿಂಚಣಿ ನೀಡುವುದಾಗಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು. ಇದೀಗ ಈ ಪಿಂಚಣಿ ಪಡೆಯಲು ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ, ಮಹಮ್ಮದ್ ಕೈಫ್, ಬಾಲಿವುಡ್ ನಟ ರಾಜ್ ಬಬ್ಬರ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರತಿ ತಿಂಗಳು 50 ಸಾವಿರ ರೂ. ಹಣ ನೀಡುವ ತೀರ್ಮಾನವನ್ನು ಉತ್ತರ ಪ್ರದೇಶ ಸರ್ಕಾರ ಘೋಷಿಸಿದ ವೇಳೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತಲ್ಲದೇ ಸಾರ್ವಜನಿಕ ಹಣವನ್ನು ಈ ರೀತಿ ಬೇಕಾಬಿಟ್ಟಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೂ ಇದನ್ನು ಲೆಕ್ಕಿಸದ ಸರ್ಕಾರ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಪ್ರಥಮವಾಗಿ ಈ ಪಿಂಚಣಿಯನ್ನು ಘೋಷಿಸಿತ್ತು.

ಆದರೆ ಇದನ್ನು ನಿರಾಕರಿಸಿದ ಅಮಿತಾನ್ ಬಚ್ಚನ್, ತಮಗೆ ನೀಡುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು. ಈ ಮಧ್ಯೆ ಸುರೇಶ್ ರೈನಾ, ಮಹಮ್ಮದ್ ಕೈಫ್, ರಾಜ್ ಬಬ್ಬರ್ ಮೊದಲಾದವರು ಈ ಪಿಂಚಣಿ ಕೋರಿ ಅರ್ಜಿ ಸಲ್ಲಿಸಿರುವುದು ಟೀಕೆಗೆ ಗುರಿಯಾಗಿದೆ. ಯಶ್ ಭಾರ್ತಿ ಪ್ರಶಸ್ತಿ ಪಡೆದಿರುವ 141 ಮಂದಿ ಪೈಕಿ 108 ಮಂದಿ ಸರ್ಕಾರದ ತೀರ್ಮಾನದಂತೆ ತಮಗೆ ಪ್ರತಿ ತಿಂಗಳು 50 ಸಾವಿರ ರೂ. ಪಿಂಚಣಿ ನೀಡುವಂತೆ ಕೋರಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...