alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 33 ಸ್ಥಾನ ಗೆಲ್ಲಲಿದೆ ರಜನಿಕಾಂತ್ ಪಕ್ಷ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿ ಕಾಂತ್ ರಾಜಕೀಯ ಪ್ರವೇಶ ಮಾಡುವುದಾಗಿ ಅಧಿಕೃತ ಹೇಳಿಕೆ ನೀಡಾಗಿದೆ. ಯಾವುದೇ ಪಕ್ಷದ ಜೊತೆ ಕೈ ಜೋಡಿಸುವುದಿಲ್ಲ ಎಂದಿರುವ ರಜನಿಕಾಂತ್ 2021ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ರಜನಿಕಾಂತ್ ಪಕ್ಷ ರಚನೆ ಘೋಷಣೆ ಮಾಡಿ 15 ದಿನಗಳ ನಂತ್ರ ನಡೆದ ಸರ್ವೆಯೊಂದು ರಜನಿಕಾಂತ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇಂಡಿಯಾ ಟುಡೆ ಹಾಗೂ ಕಾರ್ವಿ ಸಮೀಕ್ಷೆಯೊಂದನ್ನು ನಡೆಸಿದೆ. ಅದ್ರ ಪ್ರಕಾರ ಒಂದು ವೇಳೆ ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆ ನಡೆದ್ರೆ 234 ಸೀಟ್ ಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ರಜನಿ ಕೇವಲ 33 ಸೀಟ್ ಗೆಲ್ಲುತ್ತಾರಂತೆ. ರಜನಿಕಾಂತ್ ಗೆ ಸೀಟು ಕಡಿಮೆ ಸಿಗಲಿದೆ. ಆದ್ರೆ ಅವರು ಕಿಂಗ್ ಮೇಕರ್ ಆಗಲಿದ್ದಾರೆಂಬುದನ್ನು ಸರ್ವೆಯಲ್ಲಿ ಹೇಳಲಾಗಿದೆ.

ಈವರೆಗೂ ರಜನಿ ಪಕ್ಷದ ಹೆಸರು ಘೋಷಣೆ ಮಾಡಿಲ್ಲ. ಮೊದಲ ಸರ್ವೆ ಪ್ರಕಾರ ರಜನಿಗೆ ಶೇಕಡಾ 16ರಷ್ಟು ಮತ ಸಿಗಲಿದೆ.  ಸಮೀಕ್ಷೆ ಪ್ರಕಾರ ಡಿಎಂಕೆಗೆ 130 ಸೀಟ್ ಸಿಗಲಿದೆಯಂತೆ.  2016ಕ್ಕೆ ಹೋಲಿಸಿದ್ರೆ ಡಿಎಂಕೆ ಶೇಕಡಾ 4ರಷ್ಟು ಮತಗಳನ್ನು ಕಳೆದುಕೊಳ್ಳಲಿದೆಯಂತೆ. ರಜನಿಕಾಂತ್ ಪಕ್ಷದಿಂದ ಎಐಎಡಿಎಂಕೆಗೆ ಭಾರೀ ನಷ್ಟವಾಗುವ ಸಾಧ್ಯತೆಯಿದೆ. ಮಾಜಿ ಸಿಎಂ ಜಯಲಲಿತಾ ಸಾವಿನ ನಂತ್ರ ಎಐಎಡಿಎಂಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಸಮೀಕ್ಷೆ ಪ್ರಕಾರ ಕೇವಲ 68 ಸ್ಥಾನಗಳನ್ನು ಎಐಎಡಿಎಂಕೆ ಪಡೆಯಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...