alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಳ ಈ ಕೆಲಸಕ್ಕೆ ಭೇಷ್ ಎಂದ ಭಾರತೀಯರು

sunny-leone-nat-anthem-1 (1)

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಆಕೆಯ ಬ್ಯೂಟಿ, ಬೋಲ್ಡ್ ನೆಸ್ ಜೊತೆಗೆ ಸಾಮಾಜಿಕ ಕೆಲಸಗಳು ಸನ್ನಿಯನ್ನು ಮತ್ತಷ್ಟು ಇಷ್ಟಪಡುವಂತೆ ಮಾಡುತ್ತಿವೆ. ಈಗ ಸನ್ನಿ ಲಿಯೋನ್ ಮಾಡಿರುವ ಕೆಲಸಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ಭಾರತದ ಮೂಲೆ ಮೂಲೆಯ ಜನ ಕಬಡ್ಡಿ ಬಗ್ಗೆ ಮಾತನಾಡ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್ ನಾಲ್ಕರ ಪಂದ್ಯಗಳು ನಡೆಯುತ್ತಿವೆ. ಕಬಡ್ಡಿ ಗುಂಗಿನಲ್ಲಿರುವ ಜನರನ್ನು ಸನ್ನಿಲಿಯೋನ್ ಆಶ್ಚರ್ಯಗೊಳಿಸಿದ್ದಾಳೆ. ಕಬಡ್ಡಿ ಪಂದ್ಯಾವಳಿಗೆ ಬಂದು ಸನ್ನಿ ಮಾಡಿದ ಕೆಲಸ ಅಭಿಮಾನಿಗಳ ಹುಬ್ಬೇರಿಸಿದೆ.

ಸೆಕ್ಸಿ ಬೆಡಗಿ ಎಂದೇ ಹೆಸರಾದವಳು ಸನ್ನಿ.  ಮಡಿವಂತರು ಆಕೆಯಿಂದ ಸ್ವಲ್ಪ ದೂರವೇ ಇದ್ದರು. ಆದ್ರೆ ಈಗ ಸನ್ನಿ ನಾನು ಕೇವಲ ಬಿಚ್ಚಮ್ಮನಲ್ಲ. ಮನಸ್ಸು ಮಾಡಿದ್ರೆ ಏನೂ ಬೇಕಾದ್ರೂ ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾಳೆ. ರಾಷ್ಟ್ರಪ್ರೇಮದಲ್ಲಿಯೂ ಹಿಂದೆ ಬಿದ್ದಿಲ್ಲ ಬಾಲಿವುಡ್ ಬೇಬಿ ಡಾಲ್. ಸರಿಯಾಗಿ ಹಿಂದಿ ಮಾತನಾಡಲು ಬರದ ಸನ್ನಿ, ರಾಷ್ಟ್ರಗೀತೆಯನ್ನು ಅಚ್ಚುಕಟ್ಟಾಗಿ ಹಾಡಿದ್ದಾಳೆ.

ಪ್ರೊ ಕಬಡ್ಡಿ ಪಂದ್ಯವೊಂದಕ್ಕೆ ಪತಿ ಡೇನಿಯಲ್ ಹಾಗೂ ಸೋನು ಸೂದ್ ಜೊತೆ ಬಂದಿದ್ದ ಸನ್ನಿ ಲಿಯೋನ್, ಪಂದ್ಯ ಆರಂಭಕ್ಕೂ ಮುನ್ನ ಆಟಗಾರರ ಜೊತೆ ನಿಂತು ಜನಗಣಮನ ಹಾಡಿದ್ದಾಳೆ. ರಾಷ್ಟ್ರಗೀತೆ ಮೇಲೆ ಅಭಿಮಾನವಿದೆ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾಳೆ ಸನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...