alex Certify
ಕನ್ನಡ ದುನಿಯಾ       Mobile App
       

Kannada Duniya

ಇಮ್ರಾನ್‌ ಪ್ರಮಾಣವಚನ ಸಮಾರಂಭಕ್ಕೆ ಯಾರಿಗೆಲ್ಲಾ ಸಿಕ್ಕಿದೆ ಆಹ್ವಾನ?

ಪಾಕಿಸ್ತಾನ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅತಿಥಿಗಳ ಆಹ್ವಾನ ವಿಚಾರದಲ್ಲಿನ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಭಾರತೀಯ ಕ್ರಿಕೆಟ್‌ ಆಟಗಾರರು, ಇಮ್ರಾನ್‌ ಖಾನ್‌ ಸಮಕಾಲೀನರಾದ ಕಪಿಲ್‌ ದೇವ್‌, ನವಜೋತ್‌ ಸಿಂಗ್‌ ಸಿದ್ದು, ಸುನಿಲ್‌ ಗಾವಸ್ಕರ್ ಅವರಿಗೆ ಆ.18ರಂದು ನಡೆಯಲಿರುವ ಕಾರ್ಯಕ್ರಮದ ಆಹ್ವಾನ ಸಿಕ್ಕಿರುವುದು ಖಚಿತವಾಗಿದೆ. ಏತನ್ಮಧ್ಯೆ ಸುನಿಲ್‌ ಗಾವಸ್ಕರ್‌ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಲಾಗದು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಸಿದ್ದು, ಆಹ್ವಾನವನ್ನು ಸ್ವೀಕರಿಸಿದ್ದು, ಇಮ್ರಾನ್‌ ಖಾನ್‌ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ಪಿಟಿಐ ನಾಯಕ ಫೈಸಲ್‌ ಜಾವೇದ್‌ ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅತಿಥಿಗಳನ್ನು ಕರೆಯುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಫೈಸಲ್‌ ಇದೀಗ ಅಧಿಕೃತ ಘೋಷಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...