alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ಪಾಲಿಗೆ ದುಬಾರಿಯಾಗಿದ್ದಾರೆ ಗವಾಸ್ಕರ್

gavaskar_123ಬಿಸಿಸಿಐ ನ ಅಧಿಕೃತ ವೀಕ್ಷಕ ವಿವರಣೆಗಾರರ ಪೈಕಿ ಒಬ್ಬರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರೊಂದಿಗಿನ ಒಡಂಬಡಿಕೆ ಇದೇ ಏಪ್ರಿಲ್- ಮೇ ವೇಳೆಗೆ ಅಂತ್ಯಗೊಳ್ಳಲಿದ್ದು, ಅವರನ್ನು ಮುಂದುವರಿಸುವ ಕುರಿತು ಬಿಸಿಸಿಐ ಕಾರ್ಯಕಾರಿ ಸಮಿತಿ ಒಲವು ಹೊಂದಿಲ್ಲವೆಂದು ಹೇಳಲಾಗಿದೆ.

ಪ್ರತಿ ಕ್ರಿಕೆಟ್ ಪಂದ್ಯಕ್ಕೆ ಸುನೀಲ್ ಗವಾಸ್ಕರ್ ಅವರಿಗೆ ನೀಡಬೇಕಾಗಿರುವ ದುಬಾರಿ ಸಂಭಾವನೆಯೇ ಇದಕ್ಕೆ ಕಾರಣವೆನ್ನಲಾಗಿದ್ದು, ಇತರೆ ವೀಕ್ಷಕ ವಿವರಣೆಗಾರರಿಗೆ ಮೂರು ಲಕ್ಷ ರೂ. ನೀಡಿದರೆ ಸುನೀಲ್ ಗವಾಸ್ಕರ್ ಇದಕ್ಕೆ ಹತ್ತು ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆಂದು ಹೇಳಲಾಗಿದೆ.

ಹರ್ಷ ಬೋಗ್ಲೆ ಜೊತೆಗೆ ಸಂಜಯ್ ಮಂಜ್ರೇಕರ್ ಅವರನ್ನು ಬಿಸಿಸಿಐ ಅಧಿಕೃತ ವೀಕ್ಷಕ ವಿವರಣೆಕಾರರನ್ನಾಗಿ ನೇಮಿಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದ್ದು, ಜೊತೆಗೆ ಇದುವರೆಗೂ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಿ ಇದೀಗ ಅವಧಿ ಮುಗಿದ ಕಾರಣ ಆ ಸ್ಥಾನದಿಂದ ಹೊರ ಬರುತ್ತಿರುವ ರವಿಶಾಸ್ತ್ರಿಯವರನ್ನೂ ಪರಿಗಣಿಸಲು ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...