alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಈ ಕಾರಣಕ್ಕೆ ನಿಂತಿತ್ತು ಪಂದ್ಯ

ಕ್ರಿಕೆಟ್ ಪಂದ್ಯ ನಡೆಯುವ ವೇಳೆ ಮಳೆ ಸೇರಿದಂತೆ ಕೆಲ ಕಾರಣಗಳಿಗಾಗಿ ಪಂದ್ಯ ಸ್ಥಗಿತಗೊಂಡಿರುವುದನ್ನು ನೋಡಿದ್ದೇವೆ. ಆದರೆ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ರಣಜಿ ಪಂದ್ಯ ಸ್ಥಗಿತಗೊಂಡಿದ್ದೂ ಮಾತ್ರ ಯಾರೂ ಊಹಿಸಲಾಗದ ಕಾರಣಕ್ಕೆ ಎಂಬುದು ವಿಚಿತ್ರವಾದರೂ ಸತ್ಯ.

ಶುಕ್ರವಾರದಂದು ಈ ವಿಚಿತ್ರ ಘಟನೆ ನಡೆದಿದ್ದು, ದೆಹಲಿಯ ಪಾಲಂ ಏರ್ಫೋರ್ಸ್ ಮೈದಾನದಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶ ನಡುವಣದ ರಣಜಿ ಪಂದ್ಯದ ಮೂರನೇ ದಿನದ ಆಟ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಮೈದಾನಕ್ಕೆ ಕಾರೊಂದು ಎಂಟ್ರಿಯಾಗಿದೆ. ಅದೂ ನಟ್ಟ ನಡುವಿನ ಫೀಲ್ಡ್ ನಲ್ಲಿ.

ಇದನ್ನು ಕಂಡು ಆಟಗಾರರೆಲ್ಲ ಕ್ಷಣ ಕಾಲ ದಂಗಾಗಿದ್ದಾರೆ. ರಣಜಿ ಪಂದ್ಯ ನಡೆಯುತ್ತಿದ್ದರೂ ಕಾರು ಚಾಲಕ ತನ್ನ ವಾಹನ ಚಲಾಯಿಸಿಕೊಂಡು ಬರಲು ಯಾವುದೇ ಅಡೆತಡೆ ಎದುರಾಗಿಲ್ಲ. ಅಸಲಿಗೆ ಕಾರು ಚಾಲನೆ ಮಾಡಿಕೊಂಡು ಬಂದಾತನಿಗೆ ಅಲ್ಲಿ ರಣಜಿ ಪಂದ್ಯ ನಡೆಯುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಮೈದಾನದ ಮಧ್ಯೆ ಕಾರು ಪ್ರವೇಶಿಸುತ್ತಿದ್ದಂತೆ ಅಂಪೈರ್ ಗಳು ಪಂದ್ಯ ಸ್ಥಗಿತಗೊಳಿಸಿದ್ದು, ಬಳಿಕ ಪಿಚ್ ಪರಿಶೀಲನೆ ನಡೆಸಿ ಪಿಚ್ ಗೆ ಯಾವುದೇ ಹಾನಿ ಸಂಭವಿಸಿದ ಕಾರಣ ಆಟ ಮುಂದುವರೆಯಲು ಅನುವು ಮಾಡಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...