alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸ್ಟಿವ್ ಸ್ಮಿತ್

ದಕ್ಷಿಣ ಆಫ್ರಿಕಾ ವಿರುದ್ಧ ಕಳ್ಳಾಟವಾಡಿ ಒಂದು ವರ್ಷದ ನಿಷೇಧಕ್ಕೊಳಗಾಗಿರುವ ಆಸೀಸ್ ತಂಡದ ಮಾಜಿ ನಾಯಕ  ಸ್ಟಿವ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಮಿತ್ ಕಳ್ಳಾಟವಾಡಿದ್ದಕ್ಕೆ ಎಲ್ಲರ ಕ್ಷಮೆ ಕೋರಿದ್ರು. ಈ ವಿಷಾದ ಜೀವನಪೂರ್ತಿ ಇರುತ್ತದೆ ಎಂದು ಸ್ಮಿತ್ ಹೇಳಿದ್ದಾರೆ.

ಇದಕ್ಕಾಗಿ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ. ಇದು ಬೇರೆಯವರಿಗೆ ಪಾಠವಾಗಲಿದೆ ಎಂದು ಸ್ಮಿತ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಗೌರವವನ್ನು ನಾನು ವಾಪಸ್ ಪಡೆಯಬಲ್ಲೆ ಎಂದು ಭಾವಿಸುತ್ತೇನೆ. ವಿಶ್ವದಲ್ಲಿ ಕ್ರಿಕೆಟ್ ದೊಡ್ಡ ಆಟ. ಕ್ರಿಕೆಟ್ ನನ್ನ ಜೀವನ. ಇದು ನನಗೆ ವಾಪಸ್ ಸಿಗಲಿದೆ ಎಂಬ ಆಸೆ ನನಗಿದೆ ಎಂದು ಸ್ಮಿತ್ ಹೇಳಿದ್ದಾರೆ.

ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ತೇನೆ. ನನ್ನ ನಾಯಕತ್ವ ವಿಫಲವಾಗಿದೆ. ತಪ್ಪು ನಿರ್ಧಾರ ತೆಗೆದುಕೊಂಡು ನಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಸ್ಮಿತ್ ಹೇಳಿದ್ದಾರೆ. ಇದು ಮೊದಲ ಬಾರಿಯಾಗಿದೆ. ಮುಂದೆ ಇಂಥ ಘಟನೆ ನಡೆಯುವುದಿಲ್ಲವೆಂದು ಅಳುತ್ತ ಸ್ಮಿತ್ ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...