alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳಾಟವಾಡಿದ್ದ ಸ್ಮಿತ್, ವಾರ್ನರ್ ಗೆ 1 ವರ್ಷ ನಿಷೇಧ, ಕೆಮರೊನ್ ಗೆ 9 ತಿಂಗಳು ಬ್ಯಾನ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಳ್ಳಾಟವಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ತಲೆದಂಡವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಗೆ 1 ವರ್ಷ ನಿಷೇಧ ಹೇರಿದೆ. ಕೆಮರೊನ್ ಬ್ಯಾಂಕ್ರೊಫ್ಟ್ ಗೆ 9 ತಿಂಗಳು ನಿಷೇಧ ವಿಧಿಸಲಾಗಿದೆ.

ನಿಷೇಧ ಅವಧಿ ಮುಗಿಯುವವರೆಗೆ ಈ ಕ್ರಿಕೆಟಿಗರು ಆಸ್ಟ್ರೇಲಿಯಾ ತಂಡದ ಪರ ಆಡುವಂತಿಲ್ಲ. ಆದ್ರೆ ವಿದೇಶಗಳಲ್ಲಿ ಕ್ರಿಕೆಟ್ ಆಡಲು ಯಾವುದೇ ನಿರ್ಬಂಧ ಹೇರಿಲ್ಲ. ಅದು ಆಯಾ ದೇಶಗಳಿಗೆ ಬಿಟ್ಟ ವಿಚಾರ ಅಂತಾ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಹೇಳಿದೆ.

ಹಾಗಾಗಿ ಅವರು ಸ್ಥಳೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಡಬಹುದು. ಐಪಿಎಲ್ ನಲ್ಲಿ ಸಹ ಸ್ಮಿತ್ ಹಾಗೂ ವಾರ್ನರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ನಲ್ಲಿ, ಸ್ಮಿತ್ ಹಾಗೂ ವಾರ್ನರ್ ಸೂಚನೆ ಮೇರೆಗೆ ಕೆಮರೊನ್ ಬ್ಯಾಂಕ್ರೊಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...