alex Certify
ಕನ್ನಡ ದುನಿಯಾ       Mobile App
       

Kannada Duniya

ಗುಹೆಯಲ್ಲಿ ಸಿಕ್ಕಿಬಿದ್ರೂ ಎಲ್ಲರ ಮನ ಗೆದ್ದ ಫುಟ್ಬಾಲ್ ಆಟಗಾರ

ಉತ್ತರ ಥೈಲ್ಯಾಂಡ್ ನ ಗುಹೆಯಲ್ಲಿ 12 ಫುಟ್ಬಾಲ್ ಆಟಗಾರರು ಕಳೆದ 14 ದಿನಗಳಿಂದ ಸಿಕ್ಕಿಬಿದ್ದಿದ್ದಾರೆ. ಮಕ್ಕಳ ರಕ್ಷಣಾ ಕಾರ್ಯ ಜೂನ್ 25 ರಿಂದ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗ್ತಿರುವ ಕಾರಣ ಗುಹೆಯಿಂದ ಮಕ್ಕಳನ್ನು ಹೊರಗೆ ತರುವುದು ಸುಲಭವಲ್ಲವೆಂದು ಸೇನೆ ಹೇಳಿದೆ. ಗುರುವಾರ ಸೇನೆಯ ಮಾಜಿ ಕಮಾಂಡರ್ ಒಬ್ಬರು ರಕ್ಷಣಾ ಕೆಲಸದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಈ ಎಲ್ಲದರ ಮಧ್ಯೆ ಗುಹೆಯಲ್ಲಿರುವ ಫುಟ್ಬಾಲ್ ಆಟಗಾರನೊಬ್ಬ ವಿಶ್ವದ ಜನರ ಮನಸ್ಸು ಕದ್ದಿದ್ದಾನೆ. ಮ್ಯಾನ್ಮಾರ್ ನ ಅಡಲ್ ಸ್ಯಾಮ್ ಒನೆಸ್ ಥೈಲ್ಯಾಂಡ್ ಕ್ರಿಶ್ಚಿಯನ್ ಶಿಕ್ಷಕರೊಬ್ಬರ ಸಾಕು ಮಗ. 12 ಮಕ್ಕಳಲ್ಲಿ ಅಡಲ್ ಗೆ ಮಾತ್ರ ಇಂಗ್ಲೀಷ್ ಬರುತ್ತೆ. ಅಡಲ್ ನಮ್ರತೆ ಕೂಡ ಜನರ ಮನಸ್ಸು ಕದ್ದಿದೆ.

ಥೈಲ್ಯಾಂಡ್ ನ ನೌಕಾ ಸೀಲ್ ಫೇಸ್ಬುಕ್ ನಲ್ಲಿ ಆಟಗಾರರ ಫೋಟೋ ಹಾಗೂ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಅಡಲ್ ಮಾತನಾಡಿದ್ದಾನೆ. 14 ವರ್ಷದ ಅಡಲ್,  “ನಾನು ಅಡಲ್, ನನ್ನ ಆರೋಗ್ಯ ಚೆನ್ನಾಗಿದೆ’’ ಎಂದಿದ್ದಾನೆ. ಕೋಚ್ ತುಂಬಾ ಒಳ್ಳೆಯವರು ಎಂದಿರುವ ಅಡಲ್ ನಾನು ಪ್ರತಿ ಶಿಕ್ಷಕರನ್ನೂ ಗೌರವಿಸುತ್ತೇನೆ ಎಂದಿದ್ದಾನೆ.

ಇಂದು ಯಾವ ದಿನ? ನಾವು ಹಸಿವಿನಲ್ಲಿದ್ದೇವೆ. ನಾವು ಹೊರಗೆ ಬರ್ತೀವಾ? ಎಂದು ಅಡಲ್ ಕೇಳಿರುವ ಮುಗ್ದ ಪ್ರಶ್ನೆ ಎಲ್ಲರ ಮನ ಕರಗಿಸಿದೆ. ಥೈಲ್ಯಾಂಡ್ ನಲ್ಲಿ ಇಂಗ್ಲೀಷ್ ಬಲ್ಲವರ ಸಂಖ್ಯೆ ಕಡಿಮೆ. ಅಡಲ್ ಇಂಗ್ಲೀಷ್ ಮಾತನಾಡುತ್ತಾನೆಂಬುದು ಅಲ್ಲಿನವರಿಗೆ ಗೌರವದ ವಿಷ್ಯ.

ಅಡಲ್ ಫುಟ್ಬಾಲ್ ಪ್ರಿಯನಾಗಿದ್ದು, ಪಿಯಾನೋ ಹಾಗೂ ಗಿಟಾರ್ ನುಡಿಸುತ್ತಾನೆ. ಅಭ್ಯಾಸದಲ್ಲೂ ಅಡಲ್ ಮುಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...