alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸುತ್ತೆ ಐಪಿಎಲ್ ಕುರಿತ ಈ ಮಾಹಿತಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಬಿಸಿಸಿಐಗೆ ಭರ್ಜರಿ ಲಾಭವಾಗಲಿದೆ. ಯಾಕಂದ್ರೆ ಪ್ರತಿ ಮ್ಯಾಚ್ ನಿಂದ ಬಿಸಿಸಿಐಗೆ 55 ಕೋಟಿ ರೂಪಾಯಿ ಸಿಕ್ತಿದೆ. ಕಳೆದ ಸೀಸನ್ ನಲ್ಲಿ ಕೇವಲ 43 ಕೋಟಿಗೆ ಭಾರತೀಯ ಕ್ರಿಕೆಟ್ ಮಂಡಳಿ ತೃಪ್ತಿಪಟ್ಟಿತ್ತು.

ಐಪಿಎಲ್ ನಲ್ಲಿ ಎಸೆಯುವ ಪ್ರತಿ ಬಾಲ್ ಗೂ ಬೆಲೆ ಇದೆ, ಅದೆಷ್ಟು ಗೊತ್ತಾ? 23.3 ಲಕ್ಷ ರೂಪಾಯಿ. ಸ್ಟಾರ್ ಇಂಡಿಯಾಕ್ಕೆ 2022ರವರೆಗೆ ಪ್ರಸಾರ ಹಕ್ಕುಗಳನ್ನು 16,347.5 ಕೋಟಿಗೆ ಬಿಸಿಸಿಐ ಮಾರಾಟ ಮಾಡಿದೆ. 2009ರಲ್ಲಿ ಸೋನಿ 1.63 ಬಿಲಿಯನ್ ಡಾಲರ್ ಗೆ ಪ್ರಸಾರ ಹಕ್ಕುಗಳನ್ನು ಸಂಪಾದಿಸಿತ್ತು.

ಆದ್ರೀಗ ಅದರ ಮೂರು ಪಟ್ಟು ಹಣ ಬಿಸಿಸಿಐಗೆ ಸಿಗಲಿದೆ. ಯಾಕಂದ್ರೆ ಒಪ್ಪಂದದಲ್ಲಿ ಶೇ.182ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಐಪಿಎಲ್ ಅನ್ನು ಕೂಡ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಸ್ಟಾರ್ ಇಂಡಿಯಾ, ಭಾರತೀಯ ಕ್ರಿಕೆಟ್ ಪ್ರಸಾರದ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದೆ. ವರ್ಷದಲ್ಲಿ ನಡೆಯುವ ಪಂದ್ಯಗಳಲ್ಲಿ ಶೇ.76ರಷ್ಟನ್ನು ಸ್ಟಾರ್ ಇಂಡಿಯಾ ಪ್ರಸಾರ ಮಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...