alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾಗೆ ಬಂದಿಳಿದ ಶ್ರೀಲಂಕಾ ಟೀಂ

ದಿನೇಶ್ ಚಾಂಡಿಮಲ್ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿದೆ. ಬುಧವಾರ ಕೋಲ್ಕತ್ತಾಗೆ ಬಂದ ಶ್ರೀಲಂಕಾ ಟೀಂ ನಾಳೆಯಿಂದ ಅಭ್ಯಾಸ ಶುರುಮಾಡಲಿದೆ. ನವೆಂಬರ್ 11 ರಂದು ಅಭ್ಯಾಸ ಪಂದ್ಯ ನಡೆಯಲಿದೆ. ನವೆಂಬರ್ 16 ರಂದು ಭಾರತದ ವಿರುದ್ಧ ಶ್ರೀಲಂಕಾ ಟೀಂ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.

ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಟೀಂ ಮೂರು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ. ಶ್ರೀಲಂಕಾ ಕೊನೆಯದಾಗಿ ಭಾರತದಲ್ಲಿ 2009 ರಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ರಿಂದ ಭಾರತ ಕೈ ವಶ ಮಾಡಿಕೊಂಡಿತ್ತು.

ಈ ವರ್ಷ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ-20 ಸರಣಿಯನ್ನು ತನ್ನ ಕೈವಶ ಮಾಡಿಕೊಂಡು ಕ್ಲೀನ್ ಸ್ವೀಪ್ ಮಾಡಿತ್ತು. ಭಾರತದ ವಿರುದ್ಧ ಸೋತು ಸುಣ್ಣವಾಗಿದ್ದ ಶ್ರೀಲಂಕಾ ಪಡೆ ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...