alex Certify
ಕನ್ನಡ ದುನಿಯಾ       Mobile App
       

Kannada Duniya

‘ಕ್ರಿಕೆಟ್ ದೇವರು’ ಸಚಿನ್ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ನಟಿ

ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ವಿರುದ್ಧ ಪ್ರತಿಭಟಿಸಲು ಅರೆ ಬೆತ್ತಲೆಯಾಗಿದ್ದ ಟಾಲಿವುಡ್ ನಟಿ ಶ್ರೀ ರೆಡ್ಡಿ, ಈಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈಗಾಗಲೇ ತೆಲುಗು ಚಿತ್ರರಂಗದ ಕೆಲವು ಖ್ಯಾತ ನಟರ ವಿರುದ್ಧ ಆರೋಪಗಳನ್ನು ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಂಡಿರುವ ಶ್ರೀ ರೆಡ್ಡಿ, ಈಗ ಸಚಿನ್ ತೆಂಡೂಲ್ಕರ್ ರವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹಾಕಿದ್ದು, ಇದರಲ್ಲಿ ಹೈದರಾಬಾದ್ ಗೆ ಆಗಮಿಸಿದ್ದ ವೇಳೆ ಸಚಿನ್ ತೆಂಡೂಲ್ಕರ್ ಹುಡುಗಿಯೊಬ್ಬಳೊಂದಿಗೆ ರೋಮ್ಯಾನ್ಸ್ ಮಾಡಿದ್ದರು ಎಂದು ಹೇಳಿದ್ದಾಳೆ.

ಭಾರತೀಯ ಕ್ರಿಕೆಟ್ ರಂಗದಲ್ಲಿ ಉತ್ತುಂಗದ ಶಿಖರದಲ್ಲಿದ್ದಾಗಲೂ ಸಚಿನ್ ತೆಂಡೂಲ್ಕರ್ ವಿವಾದಗಳಿಂದ ದೂರ ಉಳಿದಿದ್ದು, ಅಭಿಮಾನಿಗಳು ಈಗಲೂ ಅವರನ್ನು ತಮ್ಮ ಆರಾಧ್ಯ ದೈವವೆಂದೇ ಭಾವಿಸುತ್ತಾರೆ. ಇದೀಗ ತಮ್ಮ ನೆಚ್ಚಿನ ಆಟಗಾರನ ಕುರಿತು ಇಂತಹ ಆರೋಪ ಮಾಡಿರುವ ಶ್ರೀ ರೆಡ್ಡಿ ವಿರುದ್ಧ ಅಭಿಮಾನಿಗಳು ಕಿಡಿ ಕಾರುತ್ತಿದ್ದು, ಪ್ರಚಾರಕ್ಕಾಗಿ ನೀವು ಈ ಮಟ್ಟಕ್ಕಿಳಿಯಬಾರದಾಗಿತ್ತು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...