alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟರ್

ಕುಲ

ಕೊಲಂಬೊ: ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದುವುದು ಸಹಜ. ಯಾವುದೇ ವೃತ್ತಿ ಇರಲಿ, ಒಂದು ನಿರ್ದಿಷ್ಟ ಅವಧಿ ಮುಗಿದ ನಂತರ, ನಿವೃತ್ತಿ ಹೊಂದಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಕ್ರಿಕೆಟರ್ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿರುವ, ಖ್ಯಾತ ಆಟಗಾರ ನುವಾನ್ ಕುಲಸೇಕರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 2005ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಕುಲಸೇಕರ ಇದುವರೆಗೆ 21 ಪಂದ್ಯಗಳಲ್ಲಿ ಆಟವಾಡಿದ್ದು, 48 ವಿಕೆಟ್ ಗಳಿಸಿದ್ದಾರೆ. ತಾವು ಸಾಕಷ್ಟು ಯೋಚನೆ ಮಾಡಿದ ನಂತರವೇ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲು ತೀರ್ಮಾನಿಸಿರುವುದಾಗಿ ಈ ಅನುಭವಿ ಆಟಗಾರ ತಿಳಿಸಿದ್ದಾರೆ.

ಏಕದಿನ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಆಟವಾಡುವುದಾಗಿ ಹೇಳಿದ್ದಾರೆ. 2014ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರು, ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಸಾಮರ್ಥ್ಯ ತೋರಿರಲಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...