alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಕ್ಕೆ ತೆರಳಲು ಒಲ್ಲೆ ಎಂದ ಲಂಕಾ ಕ್ರಿಕೆಟರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲು ಸೂಕ್ತ ರಾಷ್ಟ್ರ ತಮ್ಮದು ಅಂತಾ ಜಂಬ ಕೊಚ್ಚಿಕೊಳ್ತಾ ಇದ್ದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ತಂಡದ ಕ್ರಿಕೆಟಿಗರು ನಿರಾಕರಿಸಿದ್ದಾರೆ. ತಿಂಗಳಾಂತ್ಯಕ್ಕೆ ಲಾಹೋರ್ ಗೆ ತೆರಳಲು ಆಟಗಾರರು ನಿರಾಕರಿಸಿರುವ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಹಸ್ತಾಂತರಿಸಲಾಗಿದೆ.

ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಆಟಗಾರರೊಂದಿಗೆ ಚರ್ಚಿಸಲಿದೆ. ಐಸಿಸಿ ಕೂಡ ಲಾಹೋರ್ ನ ಸದ್ಯದ ಸ್ಥಿತಿ ಬಗ್ಗೆ ಸಿಂಹಳೀಯರಿಗೆ ವಿವರಣೆ ನೀಡಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ 3 ಟಿ-20 ಪಂದ್ಯಗಳ ಸರಣಿ ಆಯೋಜಿಸಲಾಗಿದೆ.

ಸರಣಿಯ ಕೊನೆಯ ಪಂದ್ಯವನ್ನು ಅಕ್ಟೋಬರ್ 29ರಂದು ಲಾಹೋರ್ ನ ಗಡಾಫಿ ಮೈದಾನದಲ್ಲಿ ನಿಗದಿ ಮಾಡಲಾಗಿತ್ತು. ಆದ್ರೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿ ಭೀತಿ ಹೆಚ್ಚಾಗಿರೋದ್ರಿಂದ ಅಲ್ಲಿಗೆ ತೆರಳಲು ಲಂಕಾ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.

2009ರಲ್ಲಿ ಲಾಹೋರ್ ನ ಗಡಾಫಿ ಮೈದಾನದ ಹೊರಭಾಗದಲ್ಲಿಯೇ ಲಂಕಾ ಕ್ರಿಕೆಟಿಗರ ಮೇಲೆ ಉಗ್ರರು ದಾಳಿ ಮಾಡಿದ್ದರು. ನಂತರ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಅವಕಾಶ ನೀಡಿರಲಿಲ್ಲ. ಆದ್ರೆ ಇತ್ತೀಚೆಗಷ್ಟೆ ಪಾಕಿಸ್ತಾನದಲ್ಲಿ World XI ತಂಡ ಪಂದ್ಯ ಆಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...