alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮಾಲಿಂಗ ಮೊರೆ ಹೋದ ಶ್ರೀಲಂಕಾ

ಕೊಲಂಬೊ: ಕಳಪೆ ಫಾರ್ಮ್ ನಿಂದ ಕಳೆದೊಂದು ವರ್ಷದಿಂದ ಶ್ರೀಲಂಕಾ ಕ್ರಿಕೆಟ್ ತಂಡದಿಂದ ದೂರ ಉಳಿದಿದ್ದ ವೇಗದ ಬೌಲರ್ ಲಸಿತ್ ಮಾಲಿಂಗಗೆ ಮತ್ತೆ ಅವಕಾಶ ಲಭಿಸಿದೆ.

ಏಷ್ಯಾಕಪ್ ಗಾಗಿ ಹದಿನಾರು ಸದಸ್ಯರ ತಂಡವನ್ನು ಆಯ್ಕೆ ಮಾಡಿರುವ ಶ್ರೀಲಂಕಾದ ಕ್ರಿಕೆಟ್ ಆಯ್ಕೆದಾರರು ಮಾಲಿಂಗಗೆ ಅವಕಾಶ ನೀಡಿ ಆಹ್ವಾನ ನೀಡಿದ್ದಾರೆ.

ಗಾಯ ಪೀಡಿತರಾಗಿದ್ದ 35 ರ ಹರೆಯದ‌ ಮಾಲಿಂಗ, ಕಳೆದ ಸೆಪ್ಟೆಂಬರ್ ನಲ್ಲಿ ಕೊನೆಯ ಏಕ ದಿನದ ಅಂತರಾಷ್ಟ್ರೀಯ ಪಂದ್ಯವಾಡಿದ್ದರು. ಭಾರತದ ವಿರುದ್ಧದ ಈ ಪಂದ್ಯದಲ್ಲಿ ಅವರು ಕೇವಲ ಒಂದು ವಿಕೆಟ್ ಗಳಿಸಿದ್ದರು. ಶ್ರೀಲಂಕಾ ಈ ಪಂದ್ಯವನ್ನು ಆರು ವಿಕೆಟ್ ಗಳಿಂದ ಸೋತಿತ್ತು.

ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದ ಮಾಲಿಂಗ ದೇಸೀ ಕ್ರಿಕೆಟ್ ನಲ್ಲಿ‌ ತೊಡಗಿ, ಅಲ್ಲಿ ಉತ್ತಮ ಸಾಧನೆ ಮಾಡಿದ್ದರು. ಜತೆಗೆ ಆಯ್ಕೆದಾರರ ಗಮನ ಸೆಳೆದಿದ್ದರು. ಈಗ ಏಷ್ಯಾ ಕಪ್ ಪಂದ್ಯಾವಳಿಯ ಏಕದಿನ ತಂಡದಲ್ಲಿ ಅವರ ಹೆಸರು ಸೇರಿಸಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ ನಲ್ಲಿ ಎರಡು ವಾರಗಳಲ್ಲಿ ಪಂದ್ಯಾವಳಿ ಆರಂಭವಾಗುತ್ತದೆ. ಮಾಲಿಂಗ ಈವರೆಗೆ 8705 ರನ್ ನೀಡಿ 301 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.

ಶ್ರೀಲಂಕಾ ತಂಡ: ಆಂಜೆಲೊ ಮ್ಯಾಥ್ಯು (ಕ್ಯಾಪ್ಟನ್), ಕುಶಲ್ ಪೆರೇರಾ, ಕುಸಲ್ ಮೆಂಡಿಸ್, ದಿನೇಶ್ ಚಂದಿಮಾಲ್, ದನುಶ್ಕ ಗುಣಾತಿಲಾಕ, ತಿಸರಾ ಪರೇರ, ದಾಸುನ್ ಶನಕ, ಧನಂಜಯ ಡಿ ಸಿಲ್ವಾ, ಅಕಿಲ ಧನಂಜಯ, ದಿಲ್ರುವಾನ್ ಪೆರೆರಾ, ಅಮಿಲಾ ಅಪೊನ್ಸೊ, ಕಸುನ್ ರಜಿತ, ಸುರಂಗಾ ಲಕ್ಮಲ್, ದುಷ್ಮಾಂತ ಚಮೀರಾ ಮತ್ತು ಲಸಿತ್ ಮಾಲಿಂಗ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...