alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ -20: ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲುವು

ಕೊಲಂಬೋ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 6 ವಿಕೆಟ್ ಗಳಿಂದ ಮಣಿಸಿದೆ.

ಮಳೆಯ ಕಾರಣದಿಂದ ಪಂದ್ಯವನ್ನು 19 ಓವರ್ ಗಳಿಗೆ ಸೀಮಿತಗೊಳಿಸಲಾಗಿದ್ದು, ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.

ದನುಷ್ಕ ಗುಣತಿಲಕ 17, ಕುಶಾಲ್ ಮೆಂಡಿಸ್ 55, ಉಪುಲ್ ತರಂಗ 22, ದಶುನ್ ಶನಕ 19 ರನ್ ಗಳಿಸಿದರು. ಭಾರತದ ಪರವಾಗಿ ಶಾರ್ದೂಲ್ ಠಾಕೂರ್ 4, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.

153 ರನ್ ಗೆಲುವಿನ ಗುರಿ ಪಡೆದ ಭಾರತ 17.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯಿಸಿತು. ರೋಹಿತ್ ಶರ್ಮಾ 11, ಸುರೇಶ್ ರೈನಾ 27, ಮನೀಶ್ ಪಾಂಡೆ 42, ದಿನೇಶ್ ಕಾರ್ತಿಕ್ 39 ರನ್ ಗಳಿಸಿದರು. ಲಂಕಾ ಪರವಾಗಿ ಧನಂಜಯ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...