alex Certify
ಕನ್ನಡ ದುನಿಯಾ       Mobile App
       

Kannada Duniya

BCCI ನಿಷೇಧಿಸಿದ್ದಕ್ಕೆ ಶ್ರೀಶಾಂತ್ ಹೊಸ ಪ್ಲಾನ್

ನವದೆಹಲಿ: ಐ.ಪಿ.ಎಲ್. ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿ.ಸಿ.ಸಿ.ಐ.ನಿಂದ ಅಜೀವ ನಿಷೇಧಕ್ಕೆ ಒಳಗಾಗಿರುವ ಎಸ್. ಶ್ರೀಶಾಂತ್ ಬೆದರಿಕೆ ತಂತ್ರದ ಮೊರೆ ಹೋಗಿದ್ದಾರೆ.

ನನಗೆ ಬಿ.ಸಿ.ಸಿ.ಐ. ನಿಷೇಧ ಹೇರಿದೆ. ಐ.ಸಿ.ಸಿ. ನಿಷೇಧ ಹೇರಿಲ್ಲ. ನಾನು ಬೇರೆ ದೇಶದ ಪರವಾಗಿ ಆಡಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ಬಿ.ಸಿ.ಸಿ.ಐ. ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದು, ತಿಂಗಳ ಹಿಂದೆ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಆದರೂ ಬಿ.ಸಿ.ಸಿ.ಐ. ನಿಷೇಧ ಹಿಂಪಡೆಯಲು ನಿರಾಕರಿಸಿ, ಮೇಲ್ಮನವಿ ಸಲ್ಲಿಸಿತ್ತು.

ಅಕ್ಟೋಬರ್ 17 ರಂದು ಕೇರಳ ಹೈಕೋರ್ಟ್ ಕೊಚ್ಚಿ ಪೀಠ ಬಿ.ಸಿ.ಸಿ.ಐ. ನಿಷೇಧ ಹೇರಿರುವುದನ್ನು ಎತ್ತಿ ಹಿಡಿದಿತ್ತು. ಇದೊಂದು ಕೆಟ್ಟ ತೀರ್ಮಾನವಾಗಿದೆ ಎಂದು ಶ್ರೀಶಾಂತ್ ಹೇಳಿದ್ದರು.

ಈಗ ಅವರು ಪ್ರತಿಕ್ರಿಯೆ ನೀಡಿ, ನನಗೆ 34 ವರ್ಷವಾಗಿದೆ. ಇನ್ನು 6 ವರ್ಷಗಳ ಕಾಲ ಕ್ರಿಕೆಟ್ ಆಡಬಹುದು. ಕ್ರಿಕೆಟ್ ಪ್ರೀತಿಸುವ ವ್ಯಕ್ತಿಯಾಗಿ ನಾನು ಬೇರೆ ದೇಶಗಳ ಪರವಾಗಿ ಆಡಲು ಸಿದ್ಧನಾಗಿದ್ದೇನೆ. ಬಿ.ಸಿ.ಸಿ.ಐ. ಖಾಸಗಿ ಕಂಪನಿಯಾಗಿದೆ ಎಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...