alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಪಿಎಲ್ ಟ್ರೋಫಿ ಅನಾವರಣಗೊಳಿಸಿದ ರಾಜಮಾತೆ

ಬೆಂಗಳೂರು: ನಾಳೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಪಿಎಲ್‌ 7ನೇ ಆವೃತ್ತಿಯ ಅಬ್ಬರ. ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಅವರು ಕೆಪಿಎಲ್ ಆವೃತ್ತಿಯ ಟ್ರೋಫಿಯನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ಆವರಣದಲ್ಲಿ ಅನಾವರಣಗೊಳಿಸಿದ್ದಾರೆ.

ಮೈಸೂರು ಅರಮನೆಯ ವಾಸ್ತುಶಿಲ್ಪ ಸ್ಫೂರ್ತಿಯಿಂದ ತಯಾರಿಸಲಾಗಿರುವ ಈ ಟ್ರೋಫಿಯಲ್ಲಿ ಸ್ವರ್ಣ ಲೇಪಿತ ಹೂವಿನ ವಿನ್ಯಾಸಗಳಿವೆ. ಜತೆಗೆ ಸ್ತಂಭದ ವಿನ್ಯಾಸದ ಮೇಲೆ ಸ್ವರ್ಣ ಲೇಪಿತ ಕ್ರಿಕೆಟ್‌ ಚೆಂಡನ್ನು ಇರಿಸಲಾಗಿದೆ. ಟ್ರೋಫಿಯ ಮಧ್ಯ ಭಾಗದಲ್ಲಿ ಆನೆ ದಂತವನ್ನು ಹೋಲುವ ಎರಡು ದೊಡ್ಡ ರೆಕ್ಕೆಗಳನ್ನು ಇರಿಸಲಾಗಿದೆ. ಇದರ ಜತೆಗೆ ವಿಶೇಷವಾಗಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಚಿತ್ರವನ್ನು ಅಳವಡಿಸಲಾಗಿದೆ. ಇನ್ನು ಟ್ರೋಫಿ ನಾಲ್ಕು ಕೆಜಿ ತೂಕ ಹೊಂದಿದ್ದು, 19.5 ಇಂಚುಗಳಷ್ಟು ಎತ್ತರವಾಗಿದೆ.

ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ರಾಜಮಾತೆ ಪ್ರಮೋದಾದೇವಿ, ಜಾಗತಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗರಿಗೆ ರಾಜ್ಯ ವೇದಿಕೆಯಾಗಿದೆ. ದಿವಂಗತ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಕ್ರಿಕೆಟ್‌ ಕುರಿತು ಅಪಾರ ಆಸಕ್ತಿ ಹೊಂದಿದ್ದರು. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೆಪಿಎಲ್‌ ಹುಟ್ಟು ಹಾಕಿದರು. ಇದು ರಾಜ್ಯದಲ್ಲಿ ಕ್ರಿಕೆಟ್‌ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.

ನಾಳೆ ಸಂಜೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಪಿಎಲ್‌ 7ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಗಾಯಕ ಚಂದನ್‌ ಶೆಟ್ಟಿ ಲೈವ್‌ ಪ್ರದರ್ಶನ ನೀಡಲಿದ್ದಾರೆ. ಚಿತ್ರರಂಗದ ತಾರೆಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಲಿ ಚಾಂಪಿಯನ್ಸ್‌ ಬೆಳಗಾವಿ ಪ್ಯಾಂಥರ್ಸ್‌ ಮತ್ತು ಆತಿಥೇಯ ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...