alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಯಲ್ಲಿ ವ್ಯಾಯಾಮ ಮಾಡಿ ಕೊಹ್ಲಿಗೆ ಚಾಲೆಂಜ್ ಮಾಡಿದ ಸಚಿವ

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಫಿಟ್ನೆಸ್ ಗೆ ಸಂಬಂಧಿಸಿದಂತೆ ಜಾಗೃತಿ ಅಭಿಯಾನ ಶುರು ಮಾಡಿದ್ದಾರೆ. ಜಾಗೃತಿ ಅಭಿಯಾನದಡಿ ರಾಜ್ಯವರ್ಧನ್ ಸಿಂಗ್ ರಾಥೋಡ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ರಾಥೋಡ್, ಕ್ರೀಡಾ ಜಗತ್ತು ಹಾಗೂ ಸಿನಿಮಾ ಜಗತ್ತಿನ ದಿಗ್ಗಜರಿಗೆ ಟ್ಯಾಗ್ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಲು ಮನವಿ ಮಾಡಿದ್ದಾರೆ.

ನಾವು ಫಿಟ್ ಆಗಿದ್ರೆ ಇಂಡಿಯಾ ಫಿಟ್ ಹೆಸರಿನಲ್ಲಿ ಟ್ವೀಟರ್ ನಲ್ಲಿ ಈ ಚಾಲೆಂಜ್ ಶುರು ಮಾಡಿದ್ದಾರೆ. ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ರಾಥೋಡ್ ವ್ಯಾಯಾಮ ಮಾಡ್ತಿದ್ದಾರೆ. ಕಚೇರಿಯಲ್ಲಿಯೇ ರಾಥೋಡ್ ವ್ಯಾಯಾಮ ಮಾಡ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರನ್ನು ನೋಡಿದಾಗೆಲ್ಲ ನನಗೆ ಸ್ಪೂರ್ತಿ ಸಿಗುತ್ತದೆ. ಅವ್ರಲ್ಲಿ ಪ್ರಚಂಡ ಶಕ್ತಿಯಿದೆ. ಮೋದಿ ಹಗಲು-ರಾತ್ರಿ ಕೆಲಸ ಮಾಡ್ತಾರೆ. ಇಡೀ ಭಾರತ ಫಿಟ್ ಆಗಿರಲಿ ಎಂದವರು ಬಯಸುತ್ತಾರೆ. ನೀವೆಲ್ಲರೂ ವ್ಯಾಯಾಮ ಮಾಡಿ, ಅದ್ರ ವಿಡಿಯೋವನ್ನು ಹಾಕಿ, ಬೇರೆಯವರನ್ನು ಪ್ರೇರೇಪಿಸಿ ಎಂದು ರಾಥೋಡ್ ಹೇಳಿದ್ದಾರೆ.

ಒಲಂಪಿಕ್ ಪದಕ ವಿಜೇತ ರಾಥೋಡ್ ತಾವು ಮಾಡಿದ ವ್ಯಾಯಾಮದ ವಿಡಿಯೋವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಗೆ ಟ್ಯಾಗ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...