alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಬೌಲಿಂಗ್ ಶೈಲಿಗೆ ಕ್ರಿಕೆಟ್ ಲೋಕವೇ ಅಚ್ಚರಿ !

akshay bowlerಮುಂಬೈ: ಯಾವುದೇ ಕ್ಷೇತ್ರಗಳಿರಲಿ ದಾಖಲೆ ಮಾಡಿದಾಗ ಸಹಜವಾಗಿಯೇ ಅಚ್ಚರಿಯಾಗುತ್ತದೆ. ಅದರಲ್ಲಿಯೂ ಕ್ರೀಡೆಗಳಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಿದಾಗ ಸಖತ್ ಸುದ್ದಿಯಾಗುತ್ತದೆ. ಇದ್ದುದರಲ್ಲೂ ಕ್ರಿಕೆಟ್ ನಲ್ಲಿ ದಾಖಲೆ, ಅಚ್ಚರಿ ನಡೆದಾಗ ನೋಡುವ ನೋಟವೇ ಬದಲಾಗುತ್ತದೆ. ಇಲ್ಲೊಬ್ಬ ಬೌಲರ್ ಈಗ ಅಚ್ಚರಿಗೆ ಕಾರಣವಾಗಿದ್ದಾರೆ.

ವಿದರ್ಭ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿರುವ 23 ವರ್ಷದ ಯುವಕ ಅಕ್ಷಯ್ ಕಾರ್ನೆವಾರ್ ಅವರನ್ನು ಇಡೀ ಕ್ರಿಕೆಟ್ ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಇದಕ್ಕೆ ಕಾರಣ ಅವರ ಬೌಲಿಂಗ್ ಶೈಲಿ. ಅಕ್ಷಯ್ ತಮ್ಮ ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಕ್ಷಯ್ ತಮ್ಮ ಎಡಗೈ ಮತ್ತು ಬಲಗೈ ಬಳಸಿ ಸ್ಪಿನ್ ಬೌಲ್ ಮಾಡುವುದನ್ನು ನೋಡುವುದೇ ಚೆಂದ. ಎರಡೂ ಕೈ ಬಳಸಿ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಅವರು ಅಚ್ಚರಿಗೆ ಕಾರಣವಾಗಿದ್ದಾರೆ. ವಿದರ್ಭ ಕ್ರಿಕೆಟ್ ತಂಡವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.

ಮುಂಬೈನಲ್ಲಿ ನಡೆದ ಪ್ರತಿಷ್ಠಿತ ಸೈಯದ್ ಮುಷ್ತಾಕ್ ಆಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಕ್ಷಯ್ ಕಾರ್ನೆವಾಲ್ ಎರಡೂ ಕೈಗಳಲ್ಲಿ ಸೇಮ್ ಸ್ಟೈಲ್ ನಲ್ಲಿ ಬೌಲಿಂಗ್ ಮಾಡಿದ್ದನ್ನು ಕಂಡವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬರೋಡಾ ಆಟಗಾರ ಇರ್ಫಾನ್ ಪಠಾಣ್ ಕೂಡ ಅಕ್ಷಯ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದರ್ಭ ಕ್ರಿಕೆಟ್ ಸಂಸ್ಥೆ ಅಕ್ಷಯ್ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...