alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ಸಾವನ್ನಪ್ಪಿದ ಗಾಲ್ಫ್ ಆಟಗಾರ್ತಿ

ಅಮೆರಿಕಾದಲ್ಲಿ ಸ್ಪ್ಯಾನಿಷ್ ಗಾಲ್ಫ್ ಆಟಗಾರ್ತಿ ಸೆಲಿಯಾ ಬಾರ್ಕ್ವಿನ್ ಹತ್ಯೆ ನಡೆದಿದ್ದು, ಈ ಸಾವಿನ ಸುತ್ತ ಅನುಮಾನಗಳು ಎದ್ದಿವೆ. ಗಾಲ್ಫ್ ಆಟಗಾರ್ತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ.

22 ವರ್ಷದ ಸೆಲಿಯಾ ಬಾರ್ಕ್ವಿನ್, ವಿಶ್ವ ವಿದ್ಯಾಲಯದ ಗಾಲ್ಫ್ ಆಟಗಾರ್ತಿ. ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸೆಲಿಯಾ, ಭರವಸೆ ಮೂಡಿಸಿದ್ದರು. ಗಾಲ್ಫ್ ಕೋರ್ಟ್ ಹತ್ತಿರ ಗಾಲ್ಫ್ ಕಿಟ್ ಸೋಮವಾರ ಬೆಳಗಿನ ಜಾವ ಕಂಡುಬಂದಿದ್ದು, ಕೂಗಳತೆಯ ದೂರದಲ್ಲಿ  ಸೆಲಿಯಾ ಶವ ಪತ್ತೆಯಾಗಿದೆ. ಸೆಲಿಯಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಕಂಡು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿನ್ ಡೇನಿಯಲ್ ರಿಚರ್ಡ್ಸ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲಿನ್ ಡೇನಿಯಲ್ ರಿಚರ್ಡ್ಸ್, ಸೆಲಿಯಾ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ. ಸೆಲಿಯಾ ಮುಖದ ಮೇಲೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.  ಭರವಸೆಯ ಗಾಲ್ಫ್ ಆಟಗಾರ್ತಿ ಸೆಲಿಯಾ ಸಾವಿಗೆ ಅಪಾರ ಜನ ಕಂಬನಿ ಮಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...