alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪರ್ಧೆ ವೇಳೆಯೇ ಬಿಚ್ಚಿಕೊಳ್ತು ಮಹಿಳಾ ಸ್ಪರ್ಧಿಯ ಹಿಂಬದಿ ಹುಕ್

ಸಾವಿರಾರು ಜನರ ಎದುರಿಗೆ ನಿಲ್ಲಬೇಕೆಂದಲ್ಲಿ ನಮ್ಮ ಉಡುಗೆ ತೊಡುಗೆಯ ಬಗ್ಗೆ ಒಂದಲ್ಲ 10 ಬಾರಿ ಸರಿಯಾಗಿದೆಯಾ ಅಂತಾ ಪರೀಕ್ಷಿಸಿಕೊಳ್ಳಬೇಕು. ಎಷ್ಟೇ ಚೆಕ್ ಮಾಡಿಕೊಂಡಿದ್ದರೂ ಕೆಲವೊಂದು ಬಾರಿ ತಪ್ಪುಗಳಾಗಿ ಹೋಗುತ್ತವೆ.

ಸೆಲೆಬ್ರಿಟಿಗಳ ವಿಚಾರದಲ್ಲಿ ಇದು ಮಾಮೂಲಿ. ಆದರೆ ಹಲವಾರು ಜನರ ಎದುರು ಡ್ಯಾನ್ಸ್ ಮಾಡುತ್ತಿದ್ದ ಯುವತಿಯ ಉಡುಗೆಯ ಹಿಂಭಾಗ ತೆರೆದುಕೊಂಡ ಘಟನೆ ಒಲಿಂಪಿಕ್ ನಲ್ಲಿ ನಡೆದಿದೆ.

ದಕ್ಷಿಣ ಕೊರಿಯಾದ ಜೋಡಿಯೊಂದು ಐಸ್ ಸ್ಕೇಟಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತನ್ನ ಪಾರ್ಟನರ್ ಅಲೆಕ್ಸಾಂಡರ್ ಜೊತೆ ನೃತ್ಯ ಮಾಡುತ್ತಿದ್ದ ಯುರಾ ಮಿನ್ ಎಂಬಾಕೆ ಹಾಕಿಕೊಂಡಿದ್ದ ರೆಡ್ ಡ್ರೆಸ್ ಹಿಂಭಾಗದ ಹುಕ್ ತೆಗೆದುಕೊಂಡಿದೆ. ಆದ್ರೆ ಈ ಜೋಡಿ ಹಿಂಜರಿದಿಲ್ಲ. ತಮ್ಮ ಪ್ರದರ್ಶನವನ್ನು ಯಶಸ್ವಿಯಾಗಿಯೇ ಮುಗಿಸಿದ್ದಾರೆ.

ಪ್ರದರ್ಶನದ ಬಳಿಕ ಮಾತನಾಡಿದ ಯುರಾ, ಇದು ಒಲಿಂಪಿಕ್ ನಲ್ಲಿ ನನ್ನ ಮೊದಲ ಪ್ರಯತ್ನ. ಮಧ್ಯದಲ್ಲಿಯೇ ನೃತ್ಯ ಮೊಟಕುಗೊಳಿಸಿದರೆ ಮೈನಸ್ ಪಾಯಿಂಟ್ ಸಿಗುತ್ತಿತ್ತು. ಅದು ನನಗೆ ಇಷ್ಟವಿರಲಿಲ್ಲ ಎಂದರು.

ಆದರೆ ಯುರಾ ಜೊತೆಗಾರ ಅಲೆಕ್ಸಾಂಡರ್, ತಮಗೆ ಭಯವಾಯಿತು ಜೊತೆಗೆ ಗಾಬರಿಯೂ ಆಗಿತ್ತು. ಆದರೂ ಹೇಗೋ ಶೋ ಮುಗಿಸಿದೆವು ಎಂದರು. ಒಟ್ಟಿನಲ್ಲಿ ಆ ಯುವತಿಯ ಅದೃಷ್ಟ ಚೆನ್ನಾಗಿತ್ತು. ಡ್ರೆಸ್ ನ ಹುಕ್ ತೆಗೆದುಕೊಂಡಿದ್ದಷ್ಟೇ ಆಗಿದ್ದರಿಂದ ಆಕೆ ಗಾಬರಿಗೊಳಗಾಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...