alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಲಸಾಧ್ಯ! ಏಕದಿನ ಪಂದ್ಯದಲ್ಲಿ 490 ರನ್ ಗಳಿಸಿದ ಭೂಪ

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ನಂಬಲಸಾಧ್ಯವಾದ ದಾಖಲೆಯೊಂದು ನಿರ್ಮಾಣವಾಗಿದೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ 20 ವರ್ಷದ ಶೇನ್ ಡ್ಯಾಡ್ಸ್ ವೆಲ್ 490 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಕ್ಲಬ್ NWU ಪುಕ್ಕೆ ತಂಡ ಮತ್ತು ಪೊಚ್ ಡಾರ್ಪ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ NWU ಪುಕ್ಕೆ ತಂಡ 387 ರನ್ ಗಳ ಅಂತರದಿಂದ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ನಡೆಸಿದ NWU ಪುಕ್ಕೆ ತಂಡ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 677 ರನ್ ಗಳಿಸಿತು. ಪೊಚ್ ಡಾರ್ಪ್ ತಂಡ 290/9 ರನ್ ಗಳಿಸಿ ಸೋಲು ಕಂಡಿತು.

ಶನಿವಾರ ತನ್ನ 20 ನೇ ಹುಟ್ಟುಹಬ್ಬವನ್ನು ಆಚರಿಸಿ ಡ್ಯಾಡ್ಸ್ ವೆಲ್ 151 ಎಸೆತಗಳನ್ನು ಎದುರಿಸಿ 57 ಸಿಕ್ಸರ್, 27 ಬೌಂಡರಿ ಒಳಗೊಂಡ 490 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಸಹ ಆಟಗಾರ ರುವಾನ್ ಹಾಸ್ ಟ್ರೂಕ್ 54 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...