alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿವೇಗದ ತ್ರಿಶತಕ ಗಳಿಸಿದ ಸೌತ್ ಆಫ್ರಿಕಾ ಆಟಗಾರ

ಜೋಹಾನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಅತಿವೇಗದ ತ್ರಿ ಶತಕ ಸಿಡಿಸುವ ಮೂಲಕ ಸೌತ್ ಆಫ್ರಿಕಾ ಆಟಗಾರ ಗಮನ ಸೆಳೆದಿದ್ದಾರೆ. ಮಾರ್ಕೊ ಮರಾಯಸ್ 191 ಎಸೆತಗಳಲ್ಲಿ ಅಜೇಯ 300 ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ದೇಶೀಯ ಕ್ರಿಕೆಟ್ ಟೂರ್ನಿಯ 3 ದಿನಗಳ ಪಂದ್ಯದಲ್ಲಿ ಮಾರ್ಕೊ ಮರಾಯಸ್, ಬಾರ್ಡರ್ ತಂಡವನ್ನು ಪ್ರತಿನಿಧಿಸಿದ್ದು, 191 ಎಸೆತಗಳಲ್ಲಿ 35 ಬೌಂಡರಿ, 13 ಸಿಕ್ಸರ್ ಒಳಗೊಂಡ ಅಜೇಯ 300 ರನ್ ಗಳಿಸಿದ್ದಾರೆ.

1921 ರಲ್ಲಿ ಆಸ್ಟ್ರೇಲಿಯಾದ ಚಾರ್ಲಿ ಮಕಾರ್ಟ್ನಿ 221 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದರು. ಇಂಗ್ಲೆಂಡ್ ನ ಫ್ರಾಂಕ್ ವೂಲಿ 230 ಎಸೆತಗಳಲ್ಲಿ, ನ್ಯೂಜಿಲೆಂಡ್ ನ ಕೆನ್ ರುದರ್ ಫೋರ್ಡ್ 234 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ 244 ಎಸೆತ, ಶ್ರೀಲಂಕಾದ ಕುಶಾಲ್ ಪೆರೆರಾ 244 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದಾರೆ. ಮಾರ್ಕೊ ಮರಾಯಸ್ 191 ಎಸೆತಗಳಲ್ಲಿ 300 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...