alex Certify
ಕನ್ನಡ ದುನಿಯಾ       Mobile App
       

Kannada Duniya

ಬೂಮ್ರಾ, ಭುವನೇಶ್ವರ್ ಮ್ಯಾಜಿಕ್, ದಕ್ಷಿಣ ಆಫ್ರಿಕಾ 194 ಕ್ಕೆ ಆಲೌಟ್

ಜೋಹಾನ್ಸ್ ಬರ್ಗ್: ಜಸ್ ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 194 ರನ್ ಗಳಿಗೆ ಆಲ್ ಔಟ್ ಆಗಿದೆ.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 187 ರನ್ ಗಳಿಗೆ ಆಲ್ ಔಟ್ ಆಗಿತ್ತು. ನಿನ್ನೆ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 6 ರನ್ ಗಳಿಸಿತ್ತು.

ಇಂದು ಆಟ ಆರಂಭಿಸಿದ ದಕ್ಷಿಣ ಆಫ್ರಿಕಾ ಪರವಾಗಿ ಕಾಗಿಸೊ ರಬಾಡ 30, ಹಾಶಿಮ್ ಆಮ್ಲ 61, ವರ್ನನ್ ಫಿಲಾಂಡರ್ 35 ರನ್ ಗಳಿಸಿದರು. 65.5 ಓವರ್ ಗಳಲ್ಲಿ 194 ರನ್ ಗಳಿಗೆ ದಕ್ಷಿಣ ಆಫ್ರಿಕಾ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ಭಾರತದ ಪರ ಭುವನೇಶ್ವರ್ ಕುಮಾರ್ 3, ಜಸ್ ಪ್ರೀತ್ ಬೂಮ್ರಾ 5, ಇಶಾಂತ್ ಶರ್ಮಾ 1, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು. ಭಾರತ 2 ನೇ ಇನ್ನಿಂಗ್ಸ್ ಆರಂಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...