alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಲಂಡರ್ ಗೆ 6 ವಿಕೆಟ್: ಭಾರತಕ್ಕೆ ಹೀನಾಯ ಸೋಲು

ಕೇಪ್ ಟೌನ್: ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 72 ರನ್ ಅಂತರದಿಂದ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ಪರವಾಗಿ ಮಾರಕ ದಾಳಿ ನಡೆಸಿದ ವೆರನ್ ಪಿಲಂಡರ್ 6 ವಿಕೆಟ್ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ 286 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ, 2 ನೇ ಇನ್ನಿಂಗ್ಸ್ ನಲ್ಲಿ 130 ರನ್ ಗಳಿಗೆ ಆಲ್ ಔಟ್ ಆಯಿತು. ಭಾರತದ ಪರವಾಗಿ ಜಸ್ ಪ್ರೀತ್ ಬೂಮ್ರಾ 3, ಮೊಹಮ್ಮದ್ ಶಮಿ 3, ಹಾರ್ದಿಕ್ ಪಾಂಡ್ಯ 2, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದುಕೊಂಡಿದ್ದಾರೆ.

208 ರನ್ ಗಳ ಗೆಲುವಿನ ಗುರಿ ಪಡೆದ ಭಾರತ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳೆದುಕೊಂಡಿದೆ. ಭಾರತದ ಪರವಾಗಿ ಮುರಳಿ ವಿಜಯ್ 13, ಶಿಖರ್ ಧವನ್ 16, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 28, ರೋಹಿತ್ ಶರ್ಮಾ 10, ವೃದ್ಧಿಮಾನ್ ಶಹಾ 8, ಹಾರ್ದಿಕ್ ಪಾಂಡ್ಯ 1, ರವಿಚಂದ್ರನ್ ಅಶ್ವಿನ್ 37, ಭುವನೇಶ್ವರ್ ಕುಮಾರ್ ಅಜೇಯ 13, ಮೊಹಮ್ಮದ್ ಶಮಿ 4, ಜಸ್ ಪ್ರೀತ್ ಬೂಮ್ರಾ 0 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರವಾಗಿ ವೆರನ್ ಪಿಲಂಡರ್ 6, ಮಾರ್ನ್ ಮಾರ್ಕೆಲ್ 2, ಕಗಿಸೊ ರಬಡಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 286, 2 ನೇ ಇನ್ನಿಂಗ್ಸ್ 130

ಭಾರತ ಮೊದಲ ಇನ್ನಿಂಗ್ಸ್ 209, 2 ನೇ ಇನ್ನಿಂಗ್ಸ್ 135

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...