alex Certify
ಕನ್ನಡ ದುನಿಯಾ       Mobile App
       

Kannada Duniya

“ನಾಯಕ ತಂಡ ಆಯ್ಕೆ ಮಾಡ್ಲಿ, ಕೋಚ್ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲಿ’’

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಕೋಚ್ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ತಂಡವನ್ನು ನಾಯಕ ಆಯ್ಕೆ ಮಾಡಲಿ. ಕೋಚ್ ಹಿಂದಿನ ಸೀಟಿನಲ್ಲಿ ಕುಳಿತಿರಲಿ ಎಂದು ಗಂಗೂಲಿ ಹೇಳಿದ್ದಾರೆ. ಕ್ರಿಕೆಟ್ ಒಂದು ನಾಯಕನ ಆಟ. ಹಾಗಾಗಿ ತಂಡದ ಆಯ್ಕೆ ಕೂಡ ನಾಯಕನ ಇಚ್ಛೆಯಂತೆ ನಡೆಯಬೇಕೆಂದು ಗಂಗೂಲಿ ಹೇಳಿದ್ದಾರೆ.

ಕ್ರಿಕೆಟನ್ನು ಫುಟ್ಬಾಲಿಗೆ ಹೋಲಿಕೆ ಮಾಡಬೇಡಿ. ವ್ಯಕ್ತಿ ನಿರ್ವಹಣೆ ಒಬ್ಬ ತರಬೇತುದಾರನಿಗಿರಬೇಕಾದ ಮಹತ್ವದ ಗುಣವೆಂದು ಗಂಗೂಲಿ ಹೇಳಿದ್ದಾರೆ. ಅನೇಕ ಕೋಚ್ ಗಳು ಕ್ರಿಕೆಟನ್ನು ಫುಟ್ಬಾಲ್ ಗೆ ಹೋಲಿಕೆ ಮಾಡ್ತಾರೆ. ಫುಟ್ಬಾಲ್ ನಂತೆ ಕ್ರಿಕೆಟ್ ಆಟಗಾರರು ಆಡಲಿ ಎಂದು ಬಯಸುತ್ತಾರೆ. ಆದ್ರೆ ಕ್ರಿಕೆಟ್ ಒಂದು ನಾಯಕನ ಆಟ. ಈ ಆಟದಲ್ಲಿ ಕೋಚ್ ಹಿಂದಿನ ಸೀಟ್ ನಲ್ಲಿ ಕುಳಿತುಕೊಳ್ಳಬೇಕೆಂದು ಗಂಗೂಲಿ ಹೇಳಿದ್ದಾರೆ.

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ತಂಡವನ್ನು ಯಾರು ಆಯ್ಕೆ ಮಾಡ್ತಾರೆ ಎಂಬುದನ್ನು ತಿಳಿಯಬಯಸುತ್ತೇನೆ. ರೋಹಿತ್ ಶರ್ಮಾ ಅಥವಾ ಶಾಸ್ತ್ರಿ? ಎಂದು ಗಂಗೂಲಿ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಸೋಲುಂಡ ನಂತ್ರ ರವಿಶಾಸ್ತ್ರಿ ವಿರುದ್ಧ ಆರೋಪಗಳ ಸುರಿಮಳೆಯಾಗಿದೆ. ಅನೇಕರು ಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿಯುವಂತೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...