alex Certify
ಕನ್ನಡ ದುನಿಯಾ       Mobile App
       

Kannada Duniya

ಗಲ್ಲಿ ಕ್ರಿಕೆಟ್ ಆಡುವಾಗ ‘ದಾದಾ’ ಭುಜಕ್ಕೆ ಗಾಯ

ganguly

ಬಂಗಾಳ ಕ್ರಿಕೆಟ್ ಸಂಸ್ಥೆಯ ಮಖ್ಯಸ್ಥರಾಗಿರೋ ಸೌರವ್ ಗಂಗೂಲಿ ಗಲ್ಲಿ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ದಾದಾ ಕ್ರಿಕೆಟ್ ಗೆ ಗುಡ್ ಬೈ ಹೇಳಿ ವರ್ಷಗಳೇ ಕಳೆದಿವೆ. ಹಾಗಂತ ಅವರೇನೂ ಕೈಯಲ್ಲಿ ಬ್ಯಾಟ್, ಬಾಲ್ ಹಿಡಿಯೋದನ್ನು ಬಿಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡ್ತಾರೆ.

ಗಂಗೂಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಮೇಲೆ ಅದೆಷ್ಟೋ ಬದಲಾವಣೆಗಳಾಗಿವೆ. ಅವರ ಹೋಮ್ ಗ್ರೌಂಡ್ ಈಡನ್ ಗಾರ್ಡನ್ ಕೂಡ ಸಾಕಷ್ಟು ಅಭಿವೃದ್ಧಿಯಾಗಿದೆ. ಮೊದಲು ಗಂಗೂಲಿಯ ಸಿಕ್ಸರ್ ಗಳಿಗೆ ಸಾಕ್ಷಿಯಾಗುತ್ತಿದ್ದ ಮೈದಾನ, ಈಗ ಅವರ ಕಾಮೆಂಟ್ರಿಗೆ ಸಾಕ್ಷಿಯಾಗ್ತಾ ಇದೆ. ಏನೇ ಬದಲಾದ್ರೂ ಈಡನ್ ಗಾರ್ಡನ್ ನಲ್ಲಿ ದಾದಾ ಬಗೆಗಿರುವ ಅಪಾರ ಅಭಿಮಾನ ಮಾತ್ರ ಕುಗ್ಗಿಲ್ಲ.

ಸೌರವ್ ಗಂಗೂಲಿ ಈಗಲೂ ಕ್ರಿಕೆಟ್ ಆಡ್ತಾರೆ, ದೊಡ್ಡ ದೊಡ್ಡ ಮೈದಾನಗಳಲ್ಲಲ್ಲ, ಗಲ್ಲಿಗಳಲ್ಲಿ. ಹೌದು ತಮ್ಮ ಅಕ್ಕಪಕ್ಕದ ಮನೆಯ ಮಕ್ಕಳ ಜೊತೆ ಸೇರಿ ಗಂಗೂಲಿ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡ್ತಾರೆ. ಇತ್ತೀಚೆಗೆ ಗಲ್ಲಿ ಕ್ರಿಕೆಟ್ ಆಡ್ತಾ ಗಂಗೂಲಿ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ರು. ನೋವಿದ್ರೂ ಭುಜ ಸವರಿಕೊಳ್ಳುತ್ತಲೇ ಬ್ಯಾಟಿಂಗ್ ಮುಂದುವರಿಸಿದ್ರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...