alex Certify
ಕನ್ನಡ ದುನಿಯಾ       Mobile App
       

Kannada Duniya

ರವಿಶಾಸ್ತ್ರಿಗೆ ತಿರುಗೇಟು ನೀಡಿದ ‘ದಾದಾ’

sourav gg

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅವರು ಕಾರ್ಯಾರಂಭ ಮಾಡಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ವಿರುದ್ಧ ಗರಂ ಆಗಿದ್ದರು.

ನಾನು ಸಂದರ್ಶನಕ್ಕೆ ಹಾಜರಾದ ಸಂದರ್ಭದಲ್ಲಿ ಸೌರವ್ ಗಂಗೂಲಿ ಹಾಜರಿರಲಿಲ್ಲ. ಇದು ನನಗೆ ಬೇಸರ ತರಿಸಿದೆ ಎಂದೆಲ್ಲಾ ರವಿಶಾಸ್ತ್ರಿ ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ನಾನು ಸಂದರ್ಶನದಲ್ಲಿ ಭಾಗವಹಿಸಿದ್ದೆ. 5 ಗಂಟೆಗೆ ಬಂಗಾಳ ಕ್ರಿಕೆಟ್ ಸಂಸ್ಥೆಯ ಸಭೆ ಏರ್ಪಾಡಾಗಿದ್ದು, ಸಂಸ್ಥೆಯ ಅಧ್ಯಕ್ಷನಾಗಿ ನಾನು ಹಾಜರಿರಬೇಕಾಗಿದ್ದರಿಂದ ಸಭೆಗೆ ಹೋಗಿದ್ದೇನೆ. ನಾನು ಇಲ್ಲದ ಕಾರಣಕ್ಕೆ ರವಿಶಾಸ್ತ್ರಿ ಅವರಿಗೆ ಕೋಚ್ ಹುದ್ದೆ ಸಿಗಲಿಲ್ಲ ಎಂಬುದು ಮೂರ್ಖತನದ ಹೇಳಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಕೋಚ್ ಆಗಬಯಸುವವರು ನಿಗದಿಯಂತೆ ಸಂದರ್ಶನಕ್ಕೆ ಹಾಜರಾಗಿ ಸಲಹಾ ಸಮಿತಿಯ ಎದುರು ಹಾಜರಿರಬೇಕೇ ಹೊರತು, ಬ್ಯಾಂಕಾಕ್ ನಲ್ಲಿ ಕುಳಿತುಕೊಂಡು ಸಂದರ್ಶನ ನೀಡುವುದಲ್ಲ. ಇದು ನಮಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿರುವ ಸೌರವ್ ಗಂಗೂಲಿ, ತಮ್ಮ ಬಗ್ಗೆ ರವಿಶಾಸ್ತ್ರಿ ನೀಡಿದ ಹೇಳಿಕೆಯಿಂದ ನೋವಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...