alex Certify
ಕನ್ನಡ ದುನಿಯಾ       Mobile App
       

Kannada Duniya

ಟೆನಿಸ್ ತಾರೆಯಿಂದ ಕೋಚಿಂಗ್

som-dde

ನವದೆಹಲಿ: ಭಾರತದ ಮಾಜಿ ನಂ. 1 ಸಿಂಗಲ್ಸ್ ಆಟಗಾರ ಸೋಮದೇವ್ ದೇವ್ ವರ್ಮನ್ ಕೋಚಿಂಗ್ ಸೆಂಟರ್ ಆರಂಭಿಸಲಿದ್ದಾರೆ.

ಟೆನಿಸ್ ಆಟಗಾರರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲು ದೆಹಲಿ ಲಾನ್ ಟೆನಿಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಸೋಮದೇವ್, ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದ ಮೂಲಕ ಪ್ರತಿಭಾನ್ವಿತ ಆಟಗಾರರನ್ನು ರೂಪಿಸಲು ಸಿದ್ಧತೆ ನಡೆಸಿದ್ದಾರೆ.

300 ಮಂದಿಗೆ ತರಬೇತಿ ನೀಡಬಹುದಾಗಿದ್ದು, 100 ಮಂದಿ ಮಕ್ಕಳಿಗೆ ಉಳಿಯುವ ವ್ಯವಸ್ಥೆ ಇದೆ. ಇನ್ನು ಹೆಚ್ಚುವರಿ ಕೋರ್ಟ್ ಗಳನ್ನು ನಿರ್ಮಾಣ ಮಾಡಲು ಮತ್ತು ನಿರ್ವಹಣೆಗಾಗಿ ಆರ್ಥಿಕ ನೆರವು ಕೋರಿ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.

ಟೆನಿಸ್ ತರಬೇತಿ ನೀಡುವ ಕುರಿತಾದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ, ಸಚಿವಾಲಯಕ್ಕೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...