alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಸ್ ಗೇಲ್ ಜೊತೆ ಪಾರ್ಟಿ ಮಾಡಿದ ನಟಿ

gale ullal

ಟಿ-20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ವಿಶ್ವಕಪ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಇಂತಹ ಸ್ಪೋಟಕ ಬ್ಯಾಟ್ಸ್ ಮನ್ ಒಡಗೂಡಿ ಭರ್ಜರಿ ಪಾರ್ಟಿ ನಡೆಸುವ ಮೂಲಕ ನಟಿಯೊಬ್ಬರು ಗಮನ ಸೆಳೆದಿದ್ದಾರೆ.

ಬಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ನಟಿಸಿರುವ ಸ್ನೇಹಾ ಉಲ್ಲಾಳ್, ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಅವರೊಂದಿಗೆ ಪಾರ್ಟಿ ಮಾಡಿದ್ದಾರೆ. ಸ್ನೇಹಾ ಉಲ್ಲಾಳ್, ತಾವು ಕ್ರಿಸ್ ಗೇಲ್ ಜೊತೆ ಮಾಡಿರುವ ಪಾರ್ಟಿಯ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಗಳೂರು ಮೂಲದ ಸ್ನೇಹಾ ಉಲ್ಲಾಳ್ ಬಾಲಿವುಡ್ ಹಾಗೂ ಟಾಲಿವುಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡು, ಗಮನ ಸೆಳೆದಿದ್ದು, ಕೆಲ ದಿನಗಳಿಂದ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ, ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೋ ಅವರೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಈ ಪಾರ್ಟಿಯಲ್ಲಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ಕ್ಯೂಟ್ ಗೇಲ್ ಎಂದು ಹೇಳಿದ್ದಾರೆ. ಈ ಪೋಟೋಗಳನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...