alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ 19 ತಂಡಕ್ಕೆ ಆಯ್ಕೆಯಾಗದ ಮಾಜಿ ಕ್ರಿಕೆಟಿಗನ ಪುತ್ರ ಅತ್ಮಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರನ ಪುತ್ರ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಡರ್ 19 ತಂಡಕ್ಕೆ ಆಯ್ಕೆಯಾಗದ ಕಾರಣಕ್ಕೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪಾಕ್ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್ ಅವರ ಪುತ್ರ ಮೊಹಮ್ಮದ್ ಜರ್ಯಾಬ್ ಆತ್ಮಹತ್ಯೆ ಮಾಡಿಕೊಂಡವರು. ಹನೀಫ್ ಅವರ ಹಿರಿಯ ಪುತ್ರ ಜರ್ಯಾಬ್ ಮೊದಲ ವರ್ಷದ ಕಾಲೇಜ್ ವಿದ್ಯಾರ್ಥಿಯಾಗಿದ್ದಾರೆ.

1990 ರಲ್ಲಿ ಹನೀಫ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು. ಅವರ ಪುತ್ರ ಲಾಹೋರ್ ನಲ್ಲಿ ಜನವರಿಯಲ್ಲಿ ನಡೆದ ಅಂಡರ್ 19 ಪಂದ್ಯದಲ್ಲಿ ಕರಾಚಿ ತಂಡವನ್ನು ಪ್ರತಿನಿಧಿಸಿದ್ದು, ಗಾಯದ ಕಾರಣ ತಂಡದಿಂದ ಕೆಲವು ದಿನಗಳಿಂದ ಹೊರಗೆ ಉಳಿದಿದ್ದರು.

ಅದರೆ, ಚೇತರಿಕೆ ಬಳಿಕವೂ ಆತನನ್ನು ಪಾಕ್ ಅಂಡರ್ 19 ತಂಡದ ಆಯ್ಕೆದಾರರು ಪರಿಗಣಿಸದ ಕಾರಣ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...