alex Certify
ಕನ್ನಡ ದುನಿಯಾ       Mobile App
       

Kannada Duniya

ಜ್ಯೂಸ್ ನಂತೆ ಹಾವಿನ ರಕ್ತ ಕುಡಿಯುವ ಬಾಕ್ಸರ್ !

alexander-horvath 8

ಮ್ಯಾಂಚೆಸ್ಟರ್: ವಿಶ್ವದಲ್ಲಿಯೇ ಅತಿ ಹೆಚ್ಚು ಶಕ್ತಿಶಾಲಿ ಸೇನೆ ಎಂದು ಹೆಸರಾಗಿರುವ ಯುಎಸ್ ಮರೀನ್ಸ್ ಸೇನೆಯ ತರಬೇತಿಯಲ್ಲಿ ಹಾವಿನ ರಕ್ತ ಕುಡಿಸುವ ಬಗ್ಗೆ ಕೇಳಿರುತ್ತೀರಿ. ಸೈನಿಕರು ಶಕ್ತಿಶಾಲಿಯಾಗಲು ಹಾವಿನ ರಕ್ತವೂ ಬೇಕೆಂಬ ನಂಬಿಕೆ ಅಲ್ಲಿನ ಜನರದ್ದಾಗಿದೆ.

ಇದೀಗ ಬಾಕ್ಸರ್ ಒಬ್ಬರು ಹಾವಿನ ರಕ್ತ ಕುಡಿಯುವ ಮೂಲಕ ಸುದ್ದಿಯಲ್ಲಿದ್ದಾರೆ. ಭಾರತದ ಖ್ಯಾತ ವೃತ್ತಿಪರ ಬಾಕ್ಸರ್ ಆಗಿರುವ ವಿಜೇಂದರ್ ಸಿಂಗ್ ಅವರನ್ನು ಸೋಲಿಸುವ ಉದ್ದೇಶದಿಂದ ಬಾಕ್ಸರ್ ಒಬ್ಬರು ಸಖತ್ ತಯಾರಿ ನಡೆಸಿದ್ದಾರೆ. ಹಂಗೇರಿ ದೇಶದ ಅಲೆಕ್ಸಾಂಡರ್ ಹೊರ್ವಾತ್ ಕಠಿಣ ಅಭ್ಯಾಸ ನಡೆಸುತ್ತಿದ್ದು, ವಿಶೇಷ ಶಕ್ತಿ ಪಡೆದುಕೊಳ್ಳಲು ಹಾವಿನ ರಕ್ತವನ್ನು ಕುಡಿಯುತ್ತಿದ್ದಾರೆ. ಮಾರ್ಚ್ 12ರಂದು ಲಿವರ್ ಪೂಲ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿಜೇಂದರ್ ಅವರನ್ನು ಎದುರಿಸಲಿದ್ದಾರೆ.

ಹಾವಿನ ರಕ್ತ ಕುಡಿಯುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಲೆಕ್ಸಾಂಡರ್ ಹೊರ್ವಾತ್, ಹಂಗೇರಿ ಸೈನಿಕರು ಹಾವಿನ ರಕ್ತ ಕುಡಿಯುವ ಮೂಲಕ ಟರ್ಕಿಯ ಸೈನಿಕರನ್ನು ಸೋಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು. ನಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ಹಾವಿನ ರಕ್ತ ಕುಡಿಯುತ್ತಾರೆ. ಹಾಗಾಗಿ ನಾನು ಕುಡಿಯುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...