alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಕ್ಕಾರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ ಸ್ಮೃತಿ

ಭಾರತದ ಯುವ ಬ್ಯಾಟ್ಸ್ ಮನ್ ಸ್ಮೃತಿ ಮಂದಣ್ಣ ವನಿತೆಯರ ಟಿ-20 ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪಂದ್ಯದ ಬಳಿಕ ಸ್ಮೃತಿ ಇನ್ಸ್ಟಾಗ್ರಾಮ್ ನಲ್ಲಿ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಕುಮಾರ್ ಸಂಗಕ್ಕಾರ ಜೊತೆಗಿನ ಫೋಟೋ ಅಪ್ ಲೋಡ್ ಮಾಡಿದ್ದಾರೆ.

ಕೆಐಎ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಸ್ಮೃತಿ ಮನಮೋಹಕ ಇನ್ನಿಂಗ್ಸ್ ನಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ್ದವು. ಮೈದಾನದಲ್ಲಿ ಸ್ಮೃತಿ ಆಟ ನೋಡಿದ ಸಂಗಕ್ಕಾರ ಟ್ವಿಟರ್ ನಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಸ್ಮೃತಿ ಪಂದ್ಯದ ಬಳಿಕ ತಮ್ಮ ನೆಚ್ಚಿನ ತಾರೆ, ಕುಮಾರ್ ಸಂಗಕ್ಕಾರ ಕಂಡು ಹರ್ಷ ವ್ಯಕ್ತಪಡಿಸಿದ್ರು. ಬಹುದಿನಗಳ ಕನಸು ನನಸಾದ ಸಂತಸವನ್ನು ಸ್ಮೃತಿ ತಿಳಿಸಿದ್ರು. ಅಲ್ಲದೆ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದು, ನಾನು ಸಂಗಕ್ಕಾರ ದೊಡ್ಡ ಅಭಿಮಾನಿ. ಇಂದಿನ ದಿನವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಇಂಗ್ಲೀಷ್ ಪ್ರೀಮಿಯರ್ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಸ್ಮೃತಿ ಮಂದಣ್ಣ ಭಾನುವಾರ, ನ್ಯೂಜಿಲೆಂಡ್ ನ ಸೋಫಿಯಾ ಡಿವೈನ್ ರ ದಾಖಲೆಯನ್ನು ಸರಿಗಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...