alex Certify
ಕನ್ನಡ ದುನಿಯಾ       Mobile App
       

Kannada Duniya

ಫೇವರೆಟ್ ಆಟಗಾರನ ಗುಟ್ಟು ಬಿಟ್ಟುಕೊಟ್ಟ ಸ್ಮೃತಿ ಮಂದಾನಾ

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಅಟಗಾರ್ತಿ ಸ್ಮೃತಿ ಮಂದಾನ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಿಯಾ ಸೂಪರ್ ಟಿ-20 ಲೀಗ್ ನಲ್ಲಿ ಸ್ಮೃತಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ದಾರೆ.

ಎಂಟು ಪಂದ್ಯಗಳಿಂದ 387 ರನ್ ಕಲೆಹಾಕಿರುವ ಸ್ಮೃತಿ ಎರಡು ಅರ್ಧ ಶತಕ ಮತ್ತು ಒಂದು ಶತಕದೊಂದಿಗೆ ಮಹಿಳಾ ಕ್ರಿಕೆಟ್ ನ ರೋಚಕತೆ ಹೆಚ್ಚಿಸುತ್ತಿದ್ದಾರೆ. ಇಂತಿಪ್ಪ ಸ್ಮೃತಿ ಮಂದಾನಾ ಅವರ ಫೇವರೆಟ್ ಬ್ಯಾಟಿಂಗ್ ಸ್ಟಾರ್ ಯಾರು ಅಂತ ಕೇಳಲಾಗಿರುವ ಪ್ರಶ್ನೆಗೆ ಸ್ಮೃತಿ ಕೊಟ್ಟ ಉತ್ತರ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕಾರ.

ಕುಮಾರ ಸಂಗಕ್ಕಾರ ಅವರು ಸ್ಮೃತಿ ಅವರಿಗೆ ಎನರ್ಜಿ ಬೂಸ್ಟರ್ ಅಂತೆ. ಯಾವಾಗ ಸ್ಮೃತಿ ಅವರಿಗೆ ತಮ್ಮ ಆಟದಲ್ಲಿ ಸಮ್ಥಿಂಗ್ ಮಿಸ್ಸಿಂಗ್ ಅಂತ ಅನ್ನಿಸುತ್ತೋ ಆಗ ಸಂಗಕ್ಕಾರ ಅವರ ಬ್ಯಾಟಿಂಗ್ ಕ್ಲಿಪ್ಸ್ ಗಳನ್ನ ನೋಡಿ ಅದರಿಂದ ಸ್ಪೂರ್ತಿ ಪಡೆದುಕೊಳ್ತಾರಂತೆ. ಕ್ರಿಕೆಟ್ ಆಡೋದಕ್ಕೆ ಮೊದಲಿನಿಂದಲೂ ಸ್ಮ್ರತಿ ಮಂದಾನ ಸಂಗಕ್ಕಾರ ಅಭಿಮಾನಿಯಂತೆ.

ಇಂಗ್ಲೆಂಡ್ ನಲ್ಲಿ ಇತ್ತೀಚೆಗೆ ಸಂಗಕ್ಕಾರ ಅವರನ್ನ ಭೇಟಿ ಮಾಡೋಕೆ ಅವಕಾಶ ಸಿಕ್ಕಾಗಲೂ ಬ್ಯಾಟಿಂಗ್ ಟೆಕ್ನಿಕ್ ಗಳ ಬಗ್ಗೆ ಸ್ಮೃತಿ ಚರ್ಚೆ ನಡೆಸಿದ್ದಾರಂತೆ. ಸಂಗಕ್ಕರಾ ಅವರಿಗೂ ಸ್ಮೃತಿ ಮಂದಾನ ಅವರ ಬ್ಯಾಟಿಂಗ್ ಶೈಲಿ ಇಷ್ಟವಂತೆ. ಬ್ಯಾಟಿಂಗ್ ಟೆಕ್ನಿಕ್ ಹೆಚ್ಚಿಸಿಕೊಳ್ಳೋದಕ್ಕೆ ಸಂಗಕ್ಕಾರ ಕೆಲವೊಂದು ಸಲಹೆಗಳನ್ನು ನೀಡಿದ್ದಾರಂತೆ. ನೆಚ್ಚಿನ ಆಟಗಾರರನ್ನು ಭೇಟಿಯಾಗಿ ಸಲಹೆ ಪಡೆದಿರೋದಕ್ಕೆ ಸ್ಮೃತಿ ಅವರಿಗೆ ಸಂತಸ ಹೆಚ್ಚಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...