alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಧುರವರ ಕೋಚ್ ಗೋಪಿಚಂದ್ ಪತ್ನಿ ಹೇಳಿದ್ದೇನು ?

RIO DE JANEIRO, BRAZIL - AUGUST 19: V. Sindhu Pusarla of India talks to her coach during the Women's Singles Gold Medal Match against Carolina Marin of Spain on Day 14 of the Rio 2016 Olympic Games at Riocentro - Pavilion 4 on August 19, 2016 in Rio de Janeiro, Brazil. (Photo by Clive Brunskill/Getty Images)

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಕುವರಿ ಪಿ.ವಿ.ಸಿಂಧು ಅವರಿಗೆ, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸಿಂಧು ಸಾಧನೆ ಹಿಂದೆ ಅವರ ಕೋಚ್ ಪುಲ್ಲೆಲ ಗೋಪಿಚಂದ್ ಅವರ ಶ್ರಮ ಇದೆ.

ಗೋಪಿಚಂದ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಹಾಗಾಗಿ ಗುರು, ಶಿಷ್ಯೆಗೆ ಅಭಿನಂದನೆಗಳ ಸುರಿಮಳೆಯಾಗಿದೆ. ಇದೇ ಸಂದರ್ಭದಲ್ಲಿ ಗೋಪಿಚಂದ್ ಅವರ ಪತ್ನಿ ಹಾಗೂ ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಪಿ.ವಿ.ಲಕ್ಷ್ಮಿ, ಸಿಂಧುಗೆ ದ್ರೋಣಾಚಾರ್ಯರಂತಹ ಗುರು ಸಿಕ್ಕಿದ್ದಾರೆ. ಅಂತಹ ಗುರು ನನಗೂ ಸಿಕ್ಕಿದ್ದರೆ, ಸಾಧನೆ ಮಾಡಲು ಅನುಕೂಲವಾಗುತ್ತಿತ್ತು. ಸಿಂಧು ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಗೋಪಿಚಂದ್ ನಮಗೆ ಹೆಚ್ಚಿನ ಸಮಯ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸಿಂಧು, ಸೈನಾ ಸೇರಿದಂತೆ ತಮ್ಮ ಶಿಷ್ಯಂದಿರ ಕುರಿತು ಗೋಪಿಚಂದ್ ಹೆಚ್ಚಿನ ಕಾಳಜಿ ವಹಿಸಿದ್ದರು. ಅವರು ಮನೆಗಿಂತ ಹೆಚ್ಚಿನ ಸಮಯವನ್ನು ಆಟಕ್ಕೆ ಮೀಸಲಿಟ್ಟಿದ್ದರು. ಅವರು ಮಾಡಿದ ಕೆಲಸಕ್ಕೆ ಫಲ ಸಿಕ್ಕಿದೆ ಎಂದು ಲಕ್ಷ್ಮಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...